Publish Date: Thu, 17 Aug 2023 (09:00 IST)
Updated Date: Thu, 17 Aug 2023 (09:13 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವೆ ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಜಸ್ಪ್ರೀತ್ ಬುಮ್ರಾ ನೇತೃತ್ವದ ಯುವ ಟೀಂ ಇಂಡಿಯಾ ಪಡೆ ಈಗಾಗಲೇ ಡುಬ್ಲಿನ್ ಗೆ ಬಂದಿಳಿದಿದೆ.
ನಿನ್ನೆಯಿಂದ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಈ ಸರಣಿಗೆ ಕೋಚ್ ರಾಹುಲ್ ದ್ರಾವಿಡ್ ಮತ್ತು ಸಿಬ್ಬಂದಿಗಳಿಗೂ ವಿಶ್ರಾಂತಿ ನೀಡಲಾಗಿದೆ.
ಇನ್ನು ಬಹಳ ದಿನಗಳ ನಂತರ ತಂಡಕ್ಕೆ ಮರಳಿರುವ ಬುಮ್ರಾ ನೆಟ್ಸ್ ನಲ್ಲಿ ಬೌಲಿಂಗ್ ನಡೆಸುತ್ತಿರುವ ವಿಡಿಯೋಗಳನ್ನು ಬಿಸಿಸಿಐ ಹಂಚಿಕೊಂಡಿದೆ. ಬೌಲಿಂಗ್ ಮೂಲಕ ಹಳೆಯ ಖದರ್ ನೆನಪಿಸಿರುವ ಬುಮ್ರಾ ಮತ್ತೆ ಹಳೆಯ ಫಾರ್ಮ್ ಗೆ ಮರಳುವ ಸೂಚನೆ ನೀಡಿದ್ದಾರೆ. ನಾಳೆ ಮೊದಲ ಪಂದ್ಯ ನಡೆಯಲಿದೆ.