Select Your Language

Notifications

webdunia
webdunia
webdunia
webdunia

ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ ಶೊಯೇಬ್ ಅಖ್ತರ್ ಸದ್ದಡಗಿಸಿದ ಗಂಗೂಲಿ

ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ ಶೊಯೇಬ್ ಅಖ್ತರ್ ಸದ್ದಡಗಿಸಿದ ಗಂಗೂಲಿ
ಮುಂಬೈ , ಶನಿವಾರ, 19 ಆಗಸ್ಟ್ 2023 (20:33 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಪುಕ್ಸಟೆ ಸಲಹೆ ನೀಡಿದ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಸಿಕ್ಕಾಪಟ್ಟೆ ಟ್ರೋಲ್ ಗೊಳಗಾಗಿದ್ದಾರೆ.

ಸಂದರ್ಶನವೊಂದರಲ್ಲಿ ಅಖ್ತರ್ ‘ಈ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ ಏಕದಿನ ಮತ್ತು ಟಿ20 ಗೆ ನಿವೃತ್ತಿ ಹೇಳಿ ಟೆಸ್ಟ್ ಕ್ರಿಕೆಟ್ ಕಡೆಗೆ ಗಮನ ಕೊಡುವುದು ಒಳ್ಳೆಯದು. ಅವರು ಟೆಸ್ಟ್ ಕ್ರಿಕೆಟ್ ಕಡೆಗೆ ಗಮನಹರಿಸಿ ಸಚಿನ್ ತೆಂಡುಲ್ಕರ್ ಅವರ 100 ಶತಕಗಳ ದಾಖಲೆ ಮುರಿಯಲಿ’ ಎಂದಿದ್ದರು. ಅವರ ಹೇಳಿಕೆ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನೊಂದೆಡೆ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು, ‘ಯಾಕೆ ನಿವೃತ್ತಿಯಾಗಬೇಕು? ಕೊಹ್ಲಿ ಚೆನ್ನಾಗಿಯೇ ಪ್ರದರ್ಶನ ನೀಡುತ್ತಿದ್ದಾರಲ್ಲಾ? ಕೊಹ್ಲಿ ಎಲ್ಲಿಯವರೆಗೆ ಬಯಸುತ್ತಾರೋ ಅಲ್ಲಿಯವರೆಗೆ ಕ್ರಿಕೆಟ್ ಆಡುತ್ತಿರಲಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರ ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ರಾಹುಲ್ ಪಾಸ್, ಅಯ್ಯರ್ ಗೆ ಆತಂಕ