Publish Date: Sun, 20 Aug 2023 (08:59 IST)
Updated Date: Sun, 20 Aug 2023 (09:01 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವೆ ಇಂದು ಡುಬ್ಲಿನ್ ನಲ್ಲಿ ದ್ವಿತೀಯ ಟಿ20 ಪಂದ್ಯ ನಡೆಯಲಿದೆ. ಕಳೆದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು.
ಮೊದಲ ಪಂದ್ಯವೂ ಇದೇ ಮೈದಾನದಲ್ಲಿ ನಡೆದಿತ್ತು. ಆದರೆ ಮಳೆಯಿಂದಾಗಿ ಪೂರ್ತಿ ಓವರ್ ಆಟ ನಡೆಯಲಿಲ್ಲ. ಕೊನೆಗೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲುವು ನಿರ್ಧರಿಸಬೇಕಾಯಿತು.
ಇದೀಗ ದ್ವಿತೀಯ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ‍್ಯತೆಯಿಲ್ಲ ಎನ್ನಲಾಗಿದೆ. ಹವಾಮಾನ ವರದಿ ಪ್ರಕಾರ ಇಂದು ಮಳೆಯಾಗುವ ಸಾಧ‍್ಯತೆಯಿಲ್ಲ. ಹೀಗಾಗಿ ಇಂದು ಪೂರ್ತಿ ಆಟ ನಡೆಯುವ ನಿರೀಕ್ಷೆಯಿದೆ.