Publish Date: Mon, 13 Mar 2023 (09:00 IST)
Updated Date: Mon, 13 Mar 2023 (09:05 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಇದುವರೆಗೆ ಗೆಲುವಿನ ಖಾತೆಯನ್ನೇ ತೆರೆಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೆಣಸಾಡಲಿದೆ.
ಮೊದಲ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ವಿರುದ್ಧ ಆಡಿ ಸೋಲು ಕಂಡಿತ್ತು. ಇದೀಗ ಮತ್ತೆ ಮೊದಲ ಗೆಲುವಿನ ಪ್ರಯತ್ನದಲ್ಲಿರುವ ಆರ್ ಸಿಬಿಗೆ ಕಠಿಣ ಎದುರಾಳಿ ಎದುರಾಗಿದೆ. ಡೆಲ್ಲಿ ಕಳೆದ ಪಂದ್ಯದಲ್ಲಿ ಮಾಡಿದ್ದ ಬ್ಯಾಟಿಂಗ್ ಆರ್ ಸಿಬಿ ತಲೆನೋವು ಹೆಚ್ಚಿಸಿರುತ್ತದೆ.
ಈ ಡಬ್ಲ್ಯುಪಿಎಲ್ ನಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಯಾಗುವುದು ಆರ್ ಸಿಬಿಗೆ ಕಷ್ಟವೇ. ಆದರೆ ಪ್ರತಿಷ್ಠೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಮೃತಿ ಮಂಧನಾ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.