Publish Date: Sun, 12 Mar 2023 (12:47 IST)
Updated Date: Sun, 12 Mar 2023 (12:49 IST)
ಅಹಮ್ಮದಾಬಾದ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ.
ಇದು ಕೊಹ್ಲಿ ಪಾಲಿನ 75 ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಬರೋಬ್ಬರಿ 40 ಟೆಸ್ಟ್ ಇನಿಂಗ್ಸ್ ಗಳ ಬಳಿಕ ಕೊಹ್ಲಿ ಶತಕ ದಾಖಲಿಸಿದ್ದು, ಟೆಸ್ಟ್ ಶತಕದ ಬರವನ್ನೂ ನೀಗಿಸಿಕೊಂಡರು.
ವಿರಾಟ್ ಕೊಹ್ಲಿಗೆ ತಕ್ಕ ಸಾಥ್ ನೀಡಿದ ಕೆಎಸ್ ಭರತ್ 44 ರನ್ ಗೆ ಔಟಾಗಿ ನಿರಾಸೆ ಅನುಭವಿಸಿದರು. ಇದೀಗ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಇನ್ನೂ 80 ರನ್ ಗಳ ಹಿನ್ನಡೆಯಲ್ಲಿದೆ.