Publish Date: Sat, 11 Mar 2023 (11:14 IST)
Updated Date: Sat, 11 Mar 2023 (11:17 IST)
ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 480 ರನ್ ಗಳಿಸಿತ್ತು. ನಿನ್ನೆ ಅಜೇಯರಾಗಿದ್ದ ರೋಹಿತ್ ಶರ್ಮಾ ಇಂದು 35 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಇದೀಗ ಇನ್ನೊಬ್ಬ ಆರಂಭಿಕ ಶುಬ್ಮನ್ ಗಿಲ್ ಅರ್ಧಶತಕ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು 59 ರನ್ ಗಳಿಸಿದ್ದು, 14 ರನ್ ಗಳಿಸಿರುವ ಚೇತೇಶ‍್ವರ ಪೂಜಾರ ಸಾಥ್ ನೀಡುತ್ತಿದ್ದಾರೆ.
ಇದೀಗ ಭಾರತ ಇನ್ನೂ ಆಸ್ಟ್ರೇಲಿಯಾದ ಪ್ರಥಮ ಇನಿಂಗ್ಸ್ ನಿಂದ 370 ರನ್ ಗಳ ಹಿನ್ನಡೆಯಲ್ಲಿದೆ. ಇಂದೂ ಭಾರತೀಯ ಬ್ಯಾಟರ್ ಗಳು ಇಡೀ ದಿನ ಬ್ಯಾಟ್ ಮಾಡಬೇಕಿದೆ.