ಅಹಮ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಪತ್ನಿ ಅನುಷ್ಕಾ ಶರ್ಮಾ ಬಹಿರಂಗಪಡಿಸಿದ್ದಾರೆ.
ಕೊಹ್ಲಿ ಬರೋಬ್ಬರಿ ಒಂದೂವರೆ ದಿನ ಬ್ಯಾಟಿಂಗ್ ಮಾಡಿ 186 ರನ್ ಗಳಿಸಿ ಕೊನೆಯವರಾಗಿ ಔಟಾಗಿದ್ದರು. ಈ ಇನಿಂಗ್ಸ್ ಗೆ ಪತಿಗೆ ಅಭಿನಂದಿಸಿದ ಅನುಷ್ಕಾ ಶರ್ಮಾ ಕೊಹ್ಲಿಗೆ ಹುಷಾರಿರಲಿಲ್ಲ ಎಂಬ ಸಂಗತಿ ಬಯಲು ಮಾಡಿದ್ದಾರೆ.
ಸೋಷಿಯಲ್ ಮೀಡಿಯಾ ಮೂಲಕ ಪತಿಗೆ ಅಭಿನಂದಿಸಿದ ಅನುಷ್ಕಾ, ಅನಾರೋಗ್ಯವಿದ್ದರೂ ಇಷ್ಟು ತಾಳ್ಮೆಯಿಂದ ಆಡಿದ ನೀವು ಯಾವತ್ತೂ ನನಗೆ ಸ್ಪೂರ್ತಿ ಎಂದಿದ್ದಾರೆ. ಸುಮಾರು 8 ಗಂಟೆ ಕಾಲ ಬ್ಯಾಟಿಂಗ್ ಮಾಡಿದ ಕೊಹ್ಲಿ ಹೆಚ್ಚಿನ ರನ್ ಗಳನ್ನೂ ಸಿಂಗಲ್ಸ್ ಮೂಲಕವೇ ಗಳಿಸಿದ್ದರು ಎನ್ನುವುದು ವಿಶೇಷ.