Publish Date: Sun, 12 Mar 2023 (12:50 IST)
Updated Date: Sun, 12 Mar 2023 (12:53 IST)
ಅಹಮ್ಮದಾಬಾದ್: ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಾರೆಂದರೆ ಅವರನ್ನು ನೋಡಲೆಂದೇ ಮೈದಾನಕ್ಕೆ ಅಭಿಮಾನಿಗಳು ಸಾಲುಗಟ್ಟಿ ಬರುತ್ತಾರೆ. ಆಸ್ಟ್ರೇಲಿಯಾ ವಿರುದ್ಧ ಅಹಮ್ಮದಾಬಾದ್ ಟೆಸ್ಟ್ ನಲ್ಲೂ ಇದೇ ನಡೆದಿದೆ.
ನಾಲ್ಕನೇ ದಿನ ಕೊಹ್ಲಿ ಊಟದ ವಿರಾಮವನ್ನು ತಮ್ಮನ್ನು ಕಾಯುತ್ತಿದ್ದ ಪುಟಾಣಿ ಅಭಿಮಾನಿಗಳಿಗಾಗಿ ತ್ಯಾಗ ಮಾಡಿದ್ದಾರೆ. ಕೊಹ್ಲಿ ಶತಕ ದಾಖಲಿಸುವುದನ್ನು ನೋಡಲು ಮೈದಾನದಲ್ಲಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಅವರನ್ನು ನಿರಾಸೆ ಮಾಡದ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಇದಕ್ಕೂ ಮೊದಲು ಫ್ಯಾನ್ಸ್ ತಮ್ಮ ಆರಾಧ್ಯ ದೈವದ ಜೊತೆ ಸೆಲ್ಫೀ ಬಯಸಿದ್ದರು. ಹೀಗಾಗಿ ಕೊಹ್ಲಿ ತಮ್ಮನ್ನು ಕಾಯುತ್ತಿದ್ದ ಪುಟಾಣಿ ಅಭಿಮಾನಿಗಳ ಬಯಕೆ ಈಡೇರಿಸಲು ಊಟದ ವಿರಾಮವನ್ನೂ ತ್ಯಾಗ ಮಾಡಿ ಅವರ ಜೊತೆ ಕಾಲ ಕಳೆದಿದ್ದಾರೆ.