Publish Date: Fri, 10 Mar 2023 (08:30 IST)
Updated Date: Fri, 10 Mar 2023 (08:49 IST)
ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ಇದುವರೆಗೆ ಒಂದೇ ಒಂದು ಗೆಲುವು ಕಾಣದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಅವಕಾಶ ಸಿಗಲಿದೆ.
ಇಂದು ಯುಪಿ ವಾರಿಯರ್ಸ್ ವಿರುದ್ಧ ಆರ್ ಸಿಬಿ ಪಂದ್ಯವಾಡಲಿದೆ. ಯುಪಿ ವಾರಿಯರ್ಸ್ ಇದುವರೆಗೆ ನಡೆದ ಪಂದ್ಯದಲ್ಲಿ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಕಂಡಿದೆ. ಆದರೆ ಆರ್ ಸಿಬಿ ಮಾತ್ರ ಇದುವರೆಗೆ ಗೆಲುವಿನ ಖಾತೆ ತೆರೆದಿಲ್ಲ.
ಎಲ್ಲಾ ಇದ್ದೂ ಗೆಲುವು ಕಾಣದ ದುರಾದೃಷ್ಟ ಆರ್ ಸಿಬಿಯದ್ದು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕೊಂಚ ಸುಧಾರಿಸಿದೆಯಾದರೂ ಬೌಲಿಂಗ್ ಈಗಲೂ ಚಿಂತೆಯ ವಿಷಯವಾಗಿದೆ. ಪ್ರಮುಖ ವೇಗಿ ರೇಣುಕಾ ಸಿಂಗ್, ಎಲ್ಸೆ ಪೆರಿ ಪರಿಣಾಮ ಬೀರುತ್ತಿಲ್ಲ. ಹೀದರ್ ನೈಟ್, ಶ್ರೇಯಾಂಕ ಪಾಟೀಲ್ ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದಾರೆ. ಜೊತೆಗೆ ಫೀಲ್ಡಿಂಗ್ ನಲ್ಲೂ ಸುಧಾರಣೆ ಕಾಣಬೇಕಿದೆ. ಆರ್ ಸಿಬಿ ಅಭಿಮಾನಿಗಳು ತಂಡದ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅದು ಇಂದಾದರೂ ನನಸಾಗುವುದೇ ಕಾದು ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.