Publish Date: Thu, 09 Mar 2023 (09:00 IST)
Updated Date: Thu, 09 Mar 2023 (09:13 IST)
ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ಉಭಯ ದೇಶಗಳ ಪ್ರಧಾನಿಗಳು ಮೈದಾನಕ್ಕೆ ಆಗಮಿಸಿದ್ದಾರೆ.
ಟಾಸ್ ಗೂ ಮುನ್ನ ಪ್ರಧಾನಿ ಮೋದಿ ಮತ್ತು ಪ್ರಧಾನಿ ಆಲ್ಬೆನ್ಸೆ ಸಮ್ಮುಖದಲ್ಲಿ ಉಭಯ ತಂಡದ ನಾಯಕರನ್ನು ಗೌರವಿಸಲಾಯಿತು. ಬಳಿಕ ಮೋದಿ ಹಾಗೂ ಆಲ್ಬೆನ್ಸೆಗೆ ರವಿಶಾಸ್ತ್ರಿ ಫೋಟೋ ಗ್ಯಾಲರಿಗಳ ಪ್ರದರ್ಶನದ ಬಗ್ಗೆ ವಿವರಣೆ ನೀಡಿದರು. ಅಲ್ಲದೆ, ಉಭಯ ಪ್ರಧಾನಿಗಳು ಮೈದಾನಕ್ಕೆ ಸುತ್ತು ಬಂದು ಪ್ರೇಕ್ಷಕರತ್ತ ಕೈ ಬೀಸಿದರು.
ಬಳಿಕ ಟಾಸ್ ನಡೆದಿದ್ದು, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಭಾರತ ತಂಡದಲ್ಲಿ ನಿರೀಕ್ಷೆಯಂತೇ ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ನೀಡಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಯಿಲ್ಲ.