Publish Date: Mon, 13 Feb 2023 (09:20 IST)
Updated Date: Mon, 13 Feb 2023 (09:23 IST)
ಬೆಂಗಳೂರು: ಏರ್ ಶೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಸ್ಯಾಂಡಲ್ ವುಡ್, ಕ್ರಿಕೆಟ್ ಮತ್ತು ಉದ್ಯಮಿಗಳ ಜೊತೆ ನಿನ್ನೆ ರಾತ್ರಿ ಔತಣಕೂಟ ನಡೆಸಿದ್ದರು.
ರಾಜಭವನದಲ್ಲಿ ಮೋದಿ ಔತಣಕೂಟಕ್ಕೆ ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮತ್ತು ಉದ್ಯಮಿ ನಿತಿನ್ ಕಾಮತ್ ಮುಂತಾದವರಿಗೆ ಆಹ್ವಾನ ನೀಡಲಾಗಿತ್ತು.
ಈ ಗಣ್ಯರು ಮೋದಿ ಜೊತೆ ನಿನ್ನೆ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ರಿಷಬ್ ಮತ್ತು ಯಶ್ ಮೋದಿ ಔತಣ ಕೂಟದಲ್ಲಿ ಪಾಲ್ಗೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.