Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ‌ ಮತ್ತೊಮ್ಮೆ ಪ್ರಧಾನಿ ಮೋದಿ ಆಗಮನ,ಶಕ್ತಿ ಸಪ್ತಾಹಕ್ಕೆ ಚಾಲನೆ ..!

ರಾಜ್ಯಕ್ಕೆ‌ ಮತ್ತೊಮ್ಮೆ ಪ್ರಧಾನಿ ಮೋದಿ ಆಗಮನ,ಶಕ್ತಿ ಸಪ್ತಾಹಕ್ಕೆ ಚಾಲನೆ ..!
bangalore , ಸೋಮವಾರ, 6 ಫೆಬ್ರವರಿ 2023 (18:04 IST)
ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಹೆಚ್ಚಾಗ್ತಾನೆ ಇದೆ. ಕಳೆದ ತಿಂಗಳು ಉತ್ತರ ಕರ್ನಾಟಕಕ್ಕೆ ಹಲವು ಸರ್ಕಾರಿ  ಯೋಜನೆಗಳಿಗೆ ಮೂರುಬಾರಿ  ಆಗಮಿಸಿದ್ದ ಪ್ರಧಾನಿ ಮೋದಿ ಮತ್ತೆ ಇಂದು ರಾಜ್ಯಕ್ಕೆ ಆಗಮಿಸಿದ್ರು. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸೋದಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ನಗರದ ಮಾದವರ ಬಳಿಯಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿ ಶಕ್ತಿ ಸಪ್ತಾಹ 2023 ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ರು 

ರಾಜ್ಯಕ್ಕೆ ಪ್ರಧಾನಿ ಮೋದಿ ಮತ್ತೆ ಆಗಮಿಸಿದ್ರು. ಬೆಳಗ್ಗೆ ದೆಹಲಿಯಿಂದ ಹೆಚ್ ಎ ಎಲ್ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ‌ ಹೆಲಿಕಾಪ್ಟರ್ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿದ್ರು. ಶಕ್ತಿ ಸಪ್ತಾಹ 2023 ಕಾರ್ಯಕ್ರಮದಲ್ಲಿ  ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕೈಗಾರಿಕೆ ವಲಯ,  ಸರ್ಕಾರಗಳು ಮತ್ತು ಶೈಕ್ಷಣಿಕ ವಲಯದ ನಾಯಕರನ್ನು ಇಂದು ಒಟ್ಟಿಗೆ  ತರಲಾಗಿತ್ತು,  ಜೊತೆಗೆ ಸವಾಲುಗಳು ಮತ್ತು ಜವಾಬ್ದಾರಿಯುತ ಇಂಧನ ಪರಿವರ್ತನೆಯ ಅವಕಾಶಗಳ ಕುರಿತು ಚರ್ಚಿಸೊದಕ್ಕೆ ಮುಕ್ತಾ ಅವಕಾಶ ನೀಡಲಾಗಿದೆ. ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಚಿವರ ಸಮ್ಮುಖದಲ್ಲಿ, 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, ಒಂದು ಸಾವಿರ ಮಳಿಗೆಗಳು, 500 ಕ್ಕೂ ಹೆಚ್ಚು ಭಾಷಣಕಾರರು ಭಾರತದ ಇಂಧನ ಭವಿಷ್ಯ ಕುರಿತ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಲು ಭಾರತ ಶಕ್ತಿ ಸಪ್ತಾಹ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿದೆ. 
ಇನ್ನೂ ಪ್ರಧಾನಿ ಮೋದಿ ಕೂಡ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಸಂವಾದದಲ್ಲಿ ಭಾಗವಹಿಸಿ  ಜೊತೆ ಚರ್ಚೆ ಮಾಡಿದ್ರು.ಭಾರತ್ ಶಕ್ತಿ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಅವರು ಚಾಲನೆ ಸೇರಿದಂತೆ, ಇಂಧನ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಎಥನಾಲ್ ಮಿಶ್ರಣ ಪ್ರಮುಖವಾಗಿ ಕೇಂದ್ರೀರಿಸಿದ ವಲಯವಾಗಿದೆ. ಎಥೆನಾಲ್ ಮಿಶ್ರಣದ ಮಾರ್ಗಸೂಚಿಯಡಿ ಇ -20 ಇಂಧನ ಉಪಕ್ರಮವನ್ನು ಪ್ರಾರಂಬಿಸೋದರ ಜೊತೆಗೆ ಹಸಿರು ಇಂಧನ ಕುರಿತು ಸಾರ್ವಜನಿಕ ಅರಿವು ಮೂಡಿಸಲು ಹಸಿರು ಸಾರಿಗೆ ಜಾಥ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದ್ರು. 

20 ಪೆಟ್ರೋಲ್ ವಿತರಣೆ ಯೋಜನೆ, 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿತರಣೆಗೆ ಚಾಲನೆ ನೀಡಿದ್ರು . ಇದ್ರಿಂದ ವಿವಿಧ ರಾಜ್ಯದ 67 ಬಂಕ್ ಗಳಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಸಿಗಲಿದೆ . ಹಸಿರು ಸಾಗಣೆ ಜಾಥಕ್ಕೆ ಚಾಲನೆ ನೀಡಿದ್ರು ಪ್ರಧಾನಿ. ಇನ್ನೂ ವಿಶೇಷ ಅಂದ್ರೆ ಹಸಿರು ಸಾಗಣೆ ಜಾಥ್ ದಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಳಿಸಿದ ವಾಹನಗಳು ಭಾಗಿಯಾಗಿ ಗಮನನ ಸೆಳೆದ್ವು.. ಇನ್ನೂ ಕಾರ್ಯಕ್ರಮದಲ್ಲಿ ಮಾತಾನಾಡಿದ ಪ್ರಧಾನಿ, ಹೂಡಿಕೆದಾರರಿಗೆ ಪ್ರಧಾನಿ ಮೋದಿ ಮುಕ್ತ ಆಹ್ವಾನ ನೀಡಿದ್ರು.ಖಾಸಗಿ ಸಹಭಾಗಿತ್ವ, ಹೂಡಿಕೆದಾರರಿಗೆ ಭಾರತ ಹೇಳಿ ಮಾಡಿಸಿದ ನೆಲೆಯಾಗಿದೆ.ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ  ಹೂಡಿಕೆದಾರರು ಮುಕ್ತವಾಗಿ ಹೂಡಿಕೆ ಮಾಡಬಹುದು ಎಂದು ಆಹ್ವಾನ ನೀಡುದ್ರು  ಮೋದಿ..

ನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬೊಮ್ಮಾಯಿ, ನಮ್ಮ ರಾಜ್ಯದಲ್ಲಿ ಇಂದನ ಸಪ್ತಾಹ ಆಯೋಜಿಸಿರೋದು ಖುಷಿ ಆಗ್ತಿದೆ ಇದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸುತ್ತೇನೆ. ಪ್ರಧಾನಿ ಮೋದಿ ಗುಜರಾತನ್ನ ಸಿಎಂ ಆಗಿದ್ದಾಗ ಸಾಕಷ್ಟು ಸುಧಾರಣೆ ಮಾಡಿದ್ರು. 50 ಸಾವಿರ‌ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನ ರಾಜ್ಯ ಮಾಡುತ್ತಿದೆ.ಇದ್ರಿಂದ ದೇಶದಲ್ಲೇ‌ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಒಂದಾಗಿದೆ.. ಅಮೃತ‌ ಕಾಲದ ಅಡಿ ಎಲ್ಲಾ  ಕ್ಷೇತ್ರವನ್ನು ಉತ್ತಮಗೊಳಿಸುತ್ತಿದ್ದಾರೆ ಅದ್ರಲ್ಲೂ ಇಂದನ‌ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಅಂತ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ರು ಸಿಎಂ ಬೊಮ್ಮಾಯ

ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಿ ಶಕ್ತಿ ಸಪ್ತಾಹ 2023 ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ರೋ ಮೂಲಕ ಮತ್ತೆ ಸಂಚಲನ‌ ಮೂಡಿಸೋದಕ್ಕೆ ಮುಂದಾಗಿದ್ದಾರೆ. ಚುನಾವಣೆಗೆ ಸಮಯದಲ್ಲಿ ಪದೇ ಪದೇ ಪ್ರಧಾನಿ ಮೋದಿ ಸೇರಿದಂತೆ ಹೈಕಮಾಂಡ್ ನಾಯಕರು ಆಗಮಿಸುತ್ತಿದ್ದು ಎಲೆಕ್ಷನ್  ಸಿದ್ದತೆ ಅಂತಾ ಆಕ್ಷೇಪ ಮಾಡ್ತಿದ್ದಾರೆ. ಈ ಆಕ್ಷೇಪಗಳಿಗೆ ಬಿಜೆಪಿ ರಾಜ್ಯ ನಾಯಕರು ಯಾವ ರೀತಿ ಉತ್ತರ ಕೊಡ್ತಾರೆ. ಪ್ರಧಾನಿ ಮೋದಿಯವರ ರಾಜ್ಯಕ್ಕೆ ಪದೇ ಪದೇ ಆಗಮಿಸುತ್ತಿರೋದು ಬಿಜೆಪಿಗೆ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೇಸ್ ಮುಖಂಡನನ್ನ ಸೆಕ್ಸ್ ಏಜೆಂಟ್ ಎಂದು ಬಿಂಬಿಸಿ ಮಾನ ಹಾನಿ