ಮುಂಬೈ: ಮಹಿಳೆಯರ ಐಪಿಎಲ್ ಎಂದೇ ಪರಿಗಣಿತವಾಗಿರುವ ಡಬ್ಲ್ಯುಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಬ್ಲ್ಯುಪಿಎಲ್ ವೇಳಾಪಟ್ಟಿ ಮತ್ತು ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ.
ಫೆಬ್ರವರಿ 14 ರಿಂದ ಡಬ್ಲ್ಯುಪಿಎಲ್ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮಾರ್ಚ್ 15 ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ವಡೋದರಾ, ಏಕನಾ ಮೈದಾನ, ಚಿನ್ನಸ್ವಾಮಿ ಮೈದಾನ, ಬ್ರೆಬೋರ್ನ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೆಬ್ರವರಿ 22 ರ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಫೆಬ್ರವರಿ 21, 22, 24, 25, 26, 27, 28 ಮತ್ತು ಮಾರ್ಚ್ 1 ರ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಆರ್ ಸಿಬಿ ಬೆಂಗಳೂರಿನಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿದೆ. ಕಳೆದ ಬಾರಿ ಬೆಂಗಳೂರಿನ ಪ್ರೇಕ್ಷಕರು ಡಬ್ಲ್ಯುಪಿಎಲ್ ಟೂರ್ನಿಗೆ ಸ್ಟೇಡಿಯಂ ಭರ್ತಿ ಮಾಡಿದ್ದರು. ಫೈನಲ್ ಪಂದ್ಯ ಬ್ರೆಬೋರ್ನ್ ಮೈದಾನದಲ್ಲಿ ನಡೆಯುವುದು.
ಆರ್ ಸಿಬಿ ಕಳೆದ ಸೀಸನ್ ನ ಚಾಂಪಿಯನ್ ಆಗಿದ್ದು ಸ್ಮೃತಿ ಮಂಧನಾ ನೇತೃತ್ವದ ತಂಡದ ಮೇಲೆ ಈ ಬಾರಿಯೂ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಎಲ್ಲಾ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ 7.30 ಕ್ಕೆ ಪಂದ್ಯ ನಡೆಯಲಿದೆ. ಇವುಗಳ ನೇರಪ್ರಸಾರವನ್ನು ಸ್ಪೋರ್ಟ್ಸ್ 18 ನೆಟ್ ವರ್ಕ್ ಅಥವಾ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ.