Select Your Language

Notifications

webdunia
webdunia
webdunia
webdunia

KL Rahul: ಆರ್ ಸಿಬಿಯಂತಲ್ಲ, ಕೆಎಲ್ ರಾಹುಲ್ ಗಾಗಿ ಯಾವುದಕ್ಕೂ ರೆಡಿಯಿದ್ದ ಡೆಲ್ಲಿ ಕ್ಯಾಪಿಟಲ್ಸ್

KL Rahul

Krishnaveni K

ನವದೆಹಲಿ , ಶುಕ್ರವಾರ, 29 ನವೆಂಬರ್ 2024 (10:55 IST)
ನವದೆಹಲಿ: ಈ ಬಾರಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಕೆಎಲ್ ರಾಹುಲ್ ರನ್ನು ಖರೀದಿಸದೇ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ರಾಹುಲ್ ಗಾಗಿ ಏನು ಮಾಡಲೂ ರೆಡಿಯಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಕೆಎಲ್ ರಾಹುಲ್ ರನ್ನು ಖರೀದಿ ಮಾಡಲು ಮೊದಲು ಆರ್ ಸಿಬಿ ಬಿಡ್ಡಿಂಗ್ ಮಾಡಿತ್ತು. ಆದರೆ ಕನ್ನಡಿಗನ ಆಯ್ಕೆಗೆ ಕೇವಲ 7 ಕೋಟಿ ರೂ. ಮೀಸಲಿಟ್ಟಿತ್ತು. ಈ ಮೊತ್ತ ದಾಟುತ್ತಿದ್ದಂತೇ ಆರ್ ಸಿಬಿ ಬಿಡ್ಡಿಂಗ್ ನಿಲ್ಲಿಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ಮುಂದುವರಿಸಿ 14 ಕೋಟಿ ರೂ.ಗೆ ರಾಹುಲ್ ರನ್ನು ತನ್ನ ತಂಡಕ್ಕೆ ಖರೀದಿ ಮಾಡಿತ್ತು.

ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲಿಕ ಪಾರ್ಥ್ ಜಿಂದಾಲ್ ಹೇಳಿಕೆ ನೀಡಿದ್ದಾರೆ. ನಾವು ರಾಹುಲ್ ಗಾಗಿ ಎಷ್ಟು ಬೇಕಾದರೂ ವೆಚ್ಚ ಮಾಡಲು ರೆಡಿಯಿದ್ದೆವು ಎಂದಿದ್ದಾರೆ. ರಿಷಬ್ ಪಂತ್ ರನ್ನು ಕೈ ಬಿಟ್ಟ ಮೇಲೆ ಡೆಲ್ಲಿ ತಂಡಕ್ಕೆ ಈ ಬಾರಿ ಒಬ್ಬ ವಿಕೆಟ್ ಕೀಪರ್ ಬ್ಯಾಟಿಗ ಮತ್ತು ಕ್ಯಾಪ್ಟನ್ ಆಗಬಲ್ಲ ಆಟಗಾರನ ಅವಶ್ಯಕತೆಯಿತ್ತು. ಹೀಗಾಗಿ ರಾಹುಲ್ ರನ್ನು ಹೇಗಾದರೂ ಖರೀದಸಲೇ ಬೇಕು ಎಂದು ಡೆಲ್ಲಿ ಫ್ರಾಂಚೈಸಿ ತೀರ್ಮಾನಿಸಿತ್ತು.

ಒಂದು ವೇಳೆ ರಾಹುಲ್ ಬೆಲೆ 14 ಕೋಟಿ ದಾಟಿದ್ದರೂ ವೆಚ್ಚ ಮಾಡಲು ನಾವು ತಯಾರಿದ್ದೆವು ಎಂದಿದ್ದಾರೆ. ರಾಹುಲ್ ನಾಯಕತ್ವ ಗುಣ ತಂಡದ ಯಶಸ್ಸಿಗೆ ಪೂರಕವಾಗಬಹುದು ಎಂದು ನಾವು ಅಂದುಕೊಂಡಿದ್ದೆವು. ಹೀಗಾಗಿ ಅವರನ್ನು ಹೇಗಾದರೂ ಖರೀದಿಸಲೇಬೇಕು ಎಂದುಕೊಂಡಿದ್ದೆವು ಎಂದಿದ್ದಾರೆ. ವಿಪರ್ಯಾಸವೆಂದರೆ ಇತ್ತ ಆರ್ ಸಿಬಿ ಅಭಿಮಾನಿಗಳು ನಮ್ಮ ಹುಡುಗ ರಾಹುಲ್ ಖರೀದಿಸಿ, ನಾಯಕ ಮಾಡಿ ಎಂದೆಲ್ಲಾ ಬೇಡಿಕೆಯಿಟ್ಟಿದ್ದಷ್ಟೇ ಬಂತು. ಆರ್ ಸಿಬಿ ಮಾಲಿಕರಿಗೆ ಅವರನ್ನು ಖರೀದಿಸುವ ಆಸಕ್ತಿಯೇ ಇರಲಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಬಹುದು, ಟೀಂ ಇಂಡಿಯಾ ಹೋದರೆ ತಪ್ಪೇನು