ಬೆಂಗಳೂರು: ಐಪಿಎಲ್ 2025 ರಲ್ಲಿ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಟೀಂ ಆಯ್ಕೆ ನಡೆದ ಮೇಲೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಈ ಕಾರಣಕ್ಕೆ ಅವರು ತಂಡವನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ.
ಇದೀಗ ಲೇಟೆಸ್ಟ್ ಆಗಿ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನೂ ಟ್ರೋಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಈ ಬಾರಿ ಆರ್ ಸಿಬಿ ತಂಡದ ನಾಯಕರಾಗಲಿದ್ದಾರೆ ಎಂಬುದು ಬಹುತೇಕ ಕನ್ ಫರ್ಮ್ ಆಗಿದೆ. ಈ ಕಾರಣಕ್ಕೆ ಅವರನ್ನು ಅಭಿಮಾನಿಗಳು ತಂಡಕ್ಕೆ ಆಯ್ಕೆಯಾದ ಆಟಗಾರರ ವಿಚಾರದಲ್ಲಿ ಟ್ರೋಲ್ ಮಾಡಿದ್ದಾರೆ.
ಆರ್ ಸಿಬಿಗೆ ಈ ಬಾರಿ ಹರಾಜಿನಲ್ಲಿ ಇಂಗ್ಲೆಂಡ್ ಮೂಲದ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್ ರಂತಹ ಪ್ರಮುಖ ಆಟಗಾರರನ್ನು ಖರೀದಿ ಮಾಡಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಲಂಡನ್ ನಲ್ಲಿಯೇ ಪತ್ನಿ ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ್ದಾರೆ.
ಇದೇ ವಿಚಾರವನ್ನಿಟ್ಟುಕೊಂಡು ಅವರನ್ನು ಟ್ರೋಲ್ ಮಾಡಲಾಗಿದೆ. ವಿರಾಟ್ ಕೊಹ್ಲಿಗೆ ತಾವು ವಾಸ ಮಾಡಲು ಮಾತ್ರವಲ್ಲ, ತಮ್ಮ ತಂಡದಲ್ಲೂ ಇಂಗ್ಲೆಂಡ್ ಆಟಗಾರರನ್ನೇ ಇಟ್ಟುಕೊಳ್ಳಲು ಇಷ್ಟವೆನಿಸುತ್ತದೆ. ಅದಕ್ಕೇ ಈ ಬಾರಿ ಆರ್ ಸಿಬಿ ತುಂಬಾ ಇಂಗ್ಲೆಂಡ್ ಆಟಗಾರರೇ ಇದ್ದಾರೆ ಎಂದು ಟ್ರೋಲ್ ಮಾಡಲಾಗಿದೆ.