Webdunia - Bharat's app for daily news and videos

Install App

ಡಬ್ಲ್ಯುಪಿಎಲ್ ಫೈನಲ್: ಆರ್ ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಯಾರು ಗೆದ್ದರೂ ಇತಿಹಾಸ

Krishnaveni K
ಶನಿವಾರ, 16 ಮಾರ್ಚ್ 2024 (15:39 IST)
ದೆಹಲಿ: ಡಬ್ಲ್ಯುಪಿಎಲ್ 2 ನೇ ಆವೃತ್ತಿಯ ಫೈನಲ್ ಪಂದ್ಯ ನಾಳೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಮೂಲಕ ಎರಡನೇ ಆವೃತ್ತಿಗೆ ವಿದ್ಯುಕ್ತ ತೆರೆ ಬೀಳಲಿದೆ.

ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ.  ಆರ್ ಸಿಬಿ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೋಲಿಸಿ ಫೈನಲ್ ಗೇರಿತ್ತು. ಟೂರ್ನಮೆಂಟ್ ನಲ್ಲಿ ಮುಂಬೈಗೆ ಹೋಲಿಸಿದರೆ ದುರ್ಬಲ ತಂಡವಾಗಿದ್ದ ಆರ್ ಸಿಬಿಗೆ ಈ ಗೆಲುವು ವಿಶೇಷ ಆತ್ಮವಿಶ್ವಾಸ ತಂದುಕೊಡಲಿದೆ.

ಅತ್ತ ಡೆಲ್ಲಿ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿತ್ತು. ಹಾಗೆ ನೋಡಿದರೆ ಡೆಲ್ಲಿಗೆ ಇದು ಎರಡನೇ ಫೈನಲ್. ಮೊದಲ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಡೆಲ್ಲಿ ಫೈನಲ್ ಆಡಿ ಸೋತಿತ್ತು. ಹೀಗಾಗಿ ಕಳೆದ ಆವೃತ್ತಿಯ ಸೋಲಿನ ತಪ್ಪು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಿದೆ.

ಅದೇನೇ ಇದ್ದರೂ ಈ ಡಬ್ಲ್ಯುಪಿಎಲ್ ನಲ್ಲಿ ಆರ್ ಸಿಬಿಯಾಗಲೀ, ಡೆಲ್ಲಿಯಾಗಲೀ ಯಾವುದೇ ತಂಡ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಪುರುಷರ ಐಪಿಎಲ್ ಇರಲಿ, ಮಹಿಳೆಯರ ಡಬ್ಲ್ಯುಪಿಎಲ್ ಇರಲಿ ಇದುವರೆಗೆ ಎರಡೂ ತಂಡಗಳಿಗೂ ಕಪ್ ಗೆಲ್ಲಲು ಸಾಧ‍್ಯವಾಗಿಲ್ಲ. ಹೀಗಾಗಿ ಮಹಿಳೆಯರ ತಂಡಗಳ ಪೈಕಿ ಯಾರೇ ಚಾಂಪಿಯನ್ ಆದರೂ ಅದು ಇತಿಹಾಸವಾಗಲಿದೆ. ಈ ಫೈನಲ್ ಪಂದ್ಯ ನಾಳೆ ಸಂಜೆ 7.30 ಕ್ಕೆ ನಡೆಯಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments