Publish Date: Sat, 16 Mar 2024 (11:40 IST)
Updated Date: Sat, 16 Mar 2024 (11:42 IST)
ದೆಹಲಿ: ಡಬ್ಲ್ಲುಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಗೇರಲು ಸಹಾಯ ಮಾಡಿದ್ದ ಕ್ರಿಕೆಟ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗರೊಬ್ಬರು ಡೇಟ್ ಮಾಡಲು ಬಯಸಿದ್ದರಂತೆ!
ವಿಶ್ವದ ಸುಂದರ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಎಲ್ಲಿಸ್ ಪೆರ್ರಿ ಈಗ ಆರ್ ಸಿಬಿ ಅಭಿಮಾನಿಗಳ ಕಣ್ಮಣಿ. ನಿರ್ಣಾಯಕ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ತಂಡವನ್ನು ಫೈನಲ್ ಗೇರುವಂತೆ ಮಾಡಿದ ಎಲ್ಲಿಸ್ ಪೆರ್ರಿಗೆ ಈಗ ಎಲ್ಲೆಡೆಯಿಂದ ಹೊಗಳಿಕೆ ವ್ಯಕ್ತವಾಗುತ್ತಿದೆ.
ಇದೇ ಎಲ್ಲಿಸ್ ಜೊತೆ ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗ ಮುರಳಿ ವಿಜಯ್ ಡೇಟ್ ಮಾಡಲು ಬಯಸಿದ್ದರು ಎಂಬ ಅಂಶವೊಂದು ಈಗ ಬಯಲಾಗಿದೆ. 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾಗ ನೀಡಿದ ಸಂದರ್ಶನವೊಂದರಲ್ಲಿ ಮುರಳಿ ವಿಜಯ್ ಈ ವಿಚಾರ ಬಹಿರಂಗಪಡಿಸಿದ್ದರು.
ಎಲ್ಲಿಸ್ ಪೆರ್ರಿ ಸುಂದರ ಆಟಗಾರ್ತಿ. ನನಗೆ ಆಕೆಯ ಮೇಲೆ ಕ್ರಶ್ ಇದೆ. ಆಕೆ ತುಂಬಾ ಸುಂದರಿ. ಆಕೆಯ ಜೊತೆ ಡಿನ್ನರ್ ಡೇಟ್ ಹೋಗಲು ಬಯಸುತ್ತೇನೆ ಎಂದು ಮುರಳಿ ವಿಜಯ್ ಹೇಳಿಕೊಂಡಿದ್ದರು. ಇದೀಗ ಎಲ್ಲಿಸ್ ಅಸಂಖ್ಯಾತ ಆರ್ ಸಿಬಿ ಅಭಿಮಾನಿಗಳ ಕ್ರಶ್ ಆಗಿದ್ದಾರೆ.