Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯ ಚಂದ್ರನಿಂದ ಇಳಿದು ಬಂದವರಾ ಎಂದ ಟೀಂ ಇಂಡಿಯಾ ವೇಗಿ

Hardik Pandya

Krishnaveni K

ಮುಂಬೈ , ಶನಿವಾರ, 16 ಮಾರ್ಚ್ 2024 (12:21 IST)
ಮುಂಬೈ: ಹಾರ್ದಿಕ್ ಪಾಂಡ್ಯಗೆ ಮಾತ್ರ ಯಾಕೆ ಹೊಸ ರೂಲ್ಸ್? ಅವರೇನು ಚಂದ್ರನಿಂದ ಇಳಿದುಬಂದಿದ್ದಾರಾ ಎಂದು ಟೀಂ ಇಂಡಿಯಾ ಮಾಜಿ ವೇಗಿ ಪ್ರವೀಣ್ ಕುಮಾರ್ ಪ್ರಶ್ನಿಸಿದ್ದಾರೆ.

ರೆಡ್ ಬಾಲ್ ಕ್ರಿಕೆಟ್ ಆಡಲು ಹಿಂದೇಟು ಹಾಕುತ್ತಿರುವ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ರನ್ನು ಇತ್ತೀಚೆಗೆ ಬಿಸಿಸಿಐ ತನ್ನ ಗುತ್ತಿಗೆ ಪಟ್ಟಿಯಿಂದ ಹೊರ ಹಾಕಿತ್ತು. ಆದರೆ ಹಾರ್ದಿಕ್ ಪಾಂಡ್ಯ ಕೂಡಾ ಟೆಸ್ಟ್ ಫಾರ್ಮ್ಯಾಟ್ ಆಡಲ್ಲ. ಹೀಗಿದ್ದರೂ ಅವರಿಗೆ ಮಾತ್ರ ಗುತ್ತಿಗೆ ನೀಡಿದೆ.

ಇದೇ ಕಾರಣಕ್ಕೆ ಪ್ರವೀಣ್ ಕುಮಾರ್ ಯೂ ಟ್ಯೂಬ್ ಸಂದರ್ಸನವೊಂದರಲ್ಲಿ ಹಾರ್ದಿಕ್ ಗೆ ಮಾತ್ರ ಈ ನಿಯಮಗಳು ಅನ್ವಯಿಸಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ‘ಹಾರ್ದಿಕ್ ಪಾಂಡ್ಯ ಚಂದ್ರನಿಂದ ನೇರವಾಗಿ ಭೂಮಿಗೆ ಇಳಿದು ಬಂದವರಾ? ಅವರೂ ರೆಡ್ ಬಾಲ್ ಕ್ರಿಕೆಟ್ ಆಡಲೇಬೇಕು. ಒಬ್ಬೊಬ್ಬ ಆಟಗಾರರಿಗೆ ಒಂದೊಂದು ನಿಯಮ ಯಾಕೆ? ಅವರಿಗೂ ಬಿಸಿಸಿಐ ಶಿಕ್ಷೆ ನೀಡಲೇಬೇಕು ಎಂದು ಪ್ರವೀಣ‍್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ರನ್ನು ಇತ್ತೀಚೆಗೆ ಗುತ್ತಿಗೆ ಪಟ್ಟಿಯಿಂದ ಹೊರಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ಹಾರ್ದಿಕ್ ಪಾಂಡ್ಯಗೆ ಅವರ ಬೆನ್ನು ಶಸ್ತ್ರಚಿಕಿತ್ಸೆ ಬಳಿಕ ಟೆಸ್ಟ್ ಮಾದರಿಯಲ್ಲಿ ಆಡುತ್ತಿಲ್ಲ. ವೈದ್ಯಕೀಯ ಕಾರಣಗಳಿಗಾಗಿ ಬಿಸಿಸಿಐ ಹಾರ್ದಿಕ್ ಗೆ ವಿನಾಯ್ತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಬೆಡಗಿ ಎಲ್ಲಿಸ್ ಪೆರಿಯೊಂದಿಗೆ ಡೇಟಿಂಗ್ ಮಾಡಲು ಬಯಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ