ವಿರಾಟ್ ಕೊಹ್ಲಿ ಇಲ್ಲದೇ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲ್ಲ

Krishnaveni K
ಶನಿವಾರ, 16 ಮಾರ್ಚ್ 2024 (14:41 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ನಿಂದ ಟೀಂ ಇಂಡಿಯಾ ಸ್ಟಾರ್ ‍ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊರಗಿಡಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೆ. ಶ್ರೀಕಾಂತ್ ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ಟಿ20 ವಿಶ್ವಕಪ್ ನಡೆಯುವ ಪಿಚ್ ಗಳು ನಿಧಾನಗತಿಯ ಪಿಚ್ ಗಳಾಗಿರುವುದರಿಂದ ಅದಕ್ಕೆ ಕೊಹ್ಲಿ ಬ್ಯಾಟಿಂಗ್ ಸೂಕ್ತವಲ್ಲ ಎಂಬ ಕಾರಣಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೊಹ್ಲಿಗೇ ಕೊಕ್ ನೀಡಲು ನಿರ್ಧರಿಸಿದ್ದಾರೆ ಎಂದು ಕೆಲವು ದಿನದ ಹಿಂದೆ ವರದಿಯಾಗಿತ್ತು.

ಕೊಹ್ಲಿಯನ್ನು ಟಿ20 ವಿಶ್ವಕಪ್ ನಿಂದ ಹೊರಗಿಡಲಾಗುತ್ತದೆ ಎಂಬ ವರದಿಗಳು ಬರುತ್ತಿದ್ದಂತೇ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪಾಕ್ ಮಾಜಿ ಕ್ರಿಕೆಟಿಗ ದನೇಶ‍್ ಕನೇರಿಯಾ ಕೂಡಾ ಕೊಹ್ಲಿಯನ್ನು ಹೊರಗಿಡಲು ನಿಮಗೆ ಹೇಗೆ ಮನಸ್ಸಾಗುತ್ತದೆ ಎಂದು ‍ಪ್ರಶ್ನಿಸಿದ್ದರು.

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ. ಶ್ರೀಕಾಂತ್, ‘ಕೊಹ್ಲಿಯಿಲ್ಲದೇ ಟಿ20 ವಿಶ್ವಕಪ್ ಗೆಲ್ಲಲು ಸಾಧ‍್ಯವಾಗದು. 2022 ರ ಟಿ20 ವಿಶ್ವಕಪ್ ನಲ್ಲಿ ನಮ್ಮ ತಂಡ ಸೆಮಿಫೈನಲ್ ಗೇರಿದ್ದೇ ಅವರಿಂದ. ಅವರು ಆ ಟೂರ್ನಮೆಂಟ್ ನ ಮ್ಯಾನ್ ಆಫ್ ದಿ ಸೀರೀಸ್ ಆಗಿದ್ದವರು. ಇಂತಹ ಆಧಾರರಹಿತ ಸುದ್ದಿಗಳನ್ನೆಲ್ಲಾ ಯಾರು ಹರಡುತ್ತಿದ್ದಾರೆ? ಅವರಿಗೆ ಬೇರೆ ಕೆಲಸವಿಲ್ಲವೇ? ಭಾರತ ಟಿ20 ವಿಶ್ವಕಪ್ ಗೆಲ್ಲಬೇಕಾದರೆ ಕೊಹ್ಲಿ ಇರಲೇಬೇಕು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾಗೆ ಮರಳಿದ ಕಿಂಗ್‌ ಕೊಹ್ಲಿ, ಸಹ ಆಟಗಾರರ ಜತೆಗಿನ ವಿರಾಟ್ ಕ್ಷಣ ನೋಡುವುದೇ ಖುಷಿ

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ಮುಂದಿನ ಸುದ್ದಿ
Show comments