Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಇಲ್ಲದ ಮೇಲೆ ಟಿ20 ವಿಶ್ವಕಪ್ ನೋಡಲ್ಲ!

Virat Kohli

Krishnaveni K

ಮುಂಬೈ , ಬುಧವಾರ, 13 ಮಾರ್ಚ್ 2024 (09:48 IST)
Photo Courtesy: Twitter
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎಂಬ ವರದಿಗಳ ಬೆನ್ನಲ್ಲೇ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಇಲ್ಲದೇ ಟಿ20 ವಿಶ್ವಕಪ್ ಗೆ ಕಳೆಯೇ ಇಲ್ಲ. ಅವರಿಲ್ಲದೇ ವಿಶ್ವಕಪ್ ಪಂದ್ಯಗಳನ್ನೇ ನೋಡಲ್ಲ ಎಂದು ವಿರಾಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ತಂಡದ ಹಿತ ದೃಷ್ಟಿಯಿಂದ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮುಂಬರುವ ಟಿ20 ವಿಶ್ವಕಪ್ ಸಂದರ್ಭದಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಆ ಪೈಕಿ ಕೊಹ್ಲಿಗೆ ಕೊಕ್ ಕೊಡುವುದೂ ಸೇರಿದೆ ಎಂದು ವರದಿಯಾಗುತ್ತಿದೆ.

ಇದರ ಬೆನ್ನಲ್ಲೇ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನ ದೊರೆ. ಅವರಿಲ್ಲದ ಮೇಲೆ ಟೂರ್ನಿಗೇ ಕಳೆಯಿಲ್ಲ. ಕೊಹ್ಲಿಯ ಸ್ಥಾನಕ್ಕೆ ಯಾವುದೇ ಆಟಗಾರನನ್ನು ಕರೆತಂದರೂ ಅದು ಕೇವಲ ಗಲ್ಲಿ ಕ್ರಿಕೆಟಿಗನಿಗೆ ಸಮನಾಗಲಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಅಫ್ಘಾನಿಸ್ತಾನ ಟಿ20 ಸರಣಿಯಲ್ಲಿ ವಿರಾಟ್ ಶೂನ್ಯ ಮತ್ತು ಕೇವಲ 29 ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಪರಿಗಣಿಸುವ ಇರಾದೆ ಆಯ್ಕೆ ಸಮಿತಿಗೆ ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಆಯ್ಕೆಯಾಗಬೇಕಾದರೂ ಐಪಿಎಲ್ ನಲ್ಲಿ ರನ್ ಹೊಳೆ ಹರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ 2024: ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಆರ್ ಸಿಬಿ ಪ್ಲೇ ಆಫ್