Select Your Language

Notifications

webdunia
webdunia
webdunia
webdunia

ಇಷ್ಟು ದಿನ ಸ್ನೇಹಿತರಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಇನ್ನು ದುಷ್ಮನ್ ಗಳು

Team India

Krishnaveni K

ಮುಂಬೈ , ಭಾನುವಾರ, 10 ಮಾರ್ಚ್ 2024 (09:10 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆಯೊಂದು ಕಾದಿದೆ. ಟೀಂ ಇಂಡಿಯಾ ಆಡುವ ಮುಂದಿನ ಸರಣಿ ನೋಡಲು ಇನ್ನು ಎರಡು ತಿಂಗಳು ಕಾಯಬೇಕಾಗುತ್ತದೆ.

ಮಾರ್ಚ್ 22 ರಿಂದ ಐಪಿಎಲ್ 2024 ಆರಂಭವಾಗುತ್ತಿದೆ. ಇದು ಮೇವರೆಗೂ ಮುಂದುವರಿಯಲಿದೆ. ಹೀಗಾಗಿ ಸದ್ಯಕ್ಕೆ ಟೀಂ ಇಂಡಿಯಾ ಆಟಗಾರರು ರಾಷ್ಟ್ರೀಯ ತಂಡದ ಪರ ಆಡುತ್ತಿಲ್ಲ. ಜೂನ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಆಗಲೇ ಟೀಂ ಇಂಡಿಯಾ ಆಟಗಾರರನ್ನು ಒಟ್ಟಾಗಿ ನೋಡಬಹುದಾಗಿದೆ.

ಈಗ ಇನ್ನೂ ಮಾರ್ಚ್ ಆರಂಭವಷ್ಟೇ. ಇನ್ನು ಜೂನ್ 5 ರಂದು ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯವಾಅಡಲಿದೆ. ಅದುವರೆಗೆ ಯಾವುದೇ ಸರಣಿಯಿಲ್ಲ. ಐಪಿಎಲ್ ಗೂ ಮೊದಲು ಟೀಂ ಇಂಡಿಯಾ ಆಟಗಾರಿಗೆ ಎರಡು ವಾರಗಳ ವಿಶ್ರಾಂತಿ ಸಿಗಲಿದೆ.

ಟೆಸ್ಟ್ ಕ್ರಿಕೆಟ್ ಸರಣಿ ಅಂತೂ ಇನ್ನು ನಾಲ್ಕು ತಿಂಗಳವರೆಗೆ ನೋಡಲು ಸಿಗಲ್ಲ. ಸದ್ಯಕ್ಕೆ ಕೆಲವು ದಿನದ ವಿಶ್ರಾಂತಿ ಬಳಿಕ ಟೀಂ ಇಂಡಿಯಾ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ಕೂಡಿಕೊಳ್ಳಲಿದ್ದಾರೆ. ಆ ಮೂಲಕ ಇಷ್ಟು ದಿನ ಸ್ನೇಹಿತರಾಗಿದ್ದ ಕ್ರಿಕೆಟಿಗರು ಇನ್ನು ಎರಡು ತಿಂಗಳು ದುಶ್ಮನ್ ಗಳಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ 2024: ರೋಚಕ ಗಳಿಗೆಗೆ ಸಾಕ್ಷಿಯಾದ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಪಂದ್ಯ