Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2024: ರೋಚಕ ಗಳಿಗೆಗೆ ಸಾಕ್ಷಿಯಾದ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಪಂದ್ಯ

Harmanpreet Kaur

Krishnaveni K

ದೆಹಲಿ , ಭಾನುವಾರ, 10 ಮಾರ್ಚ್ 2024 (08:40 IST)
ದೆಹಲಿ: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಡಬ್ಲ್ಯುಪಿಎಲ್ ಪಂದ್ಯ ರೋಚಕತೆಯ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಪಂದ್ಯವನ್ನು ಮುಂಬೈ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಈ ಬೃಹತ್ ಮೊತ್ತ ಗಳಿಸುವ ಹಾದಿಯಲ್ಲಿ ಮುಂಬೈ 12 ಓವರ್ ಗಳಲ್ಲಿ ಕೇವಲ 90 ರನ್ ಗಳಿಸಿದ್ದ ಮುಂಬೈಗೆ ಬಲ ನೀಡಿದ್ದು ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್.

ಕೇವಲ 48 ಬಾಲ್ ಎದುರಿಸಿದ ಅವರು 5 ಸಿಕ್ಸರ್, 10 ಬೌಂಡರಿಗಳ ನೆರವಿನಿಂದ ಅಜೇಯ 95 ರನ್ ಗಳಿಸಿದರು. ಡಬ್ಲ್ಯುಪಿಎಲ್ ಕೂಟದ ಮೊದಲ ಶತಕ ದಾಖಲಾಗುವುದು ಸ್ವಲ್ಪದರಲ್ಲೇ ಮಿಸ್ ಆಯ್ತು. ಆದರೆ ಭಾರತದ ಪರ ಅತ್ಯಧಿಕ ರನ್ ಗಳಿಸಿದ ದಾಖಲೆ ಮಾಡಿದರು. ನಾಲ್ಕನೇ ವಿಕೆಟ್ ಗೆ ಅಮೆಲಿಯಾ ಕೆರ್ ಜೊತೆಗೂಡಿ 38 ಎಸೆತಗಳಿಂದ 93 ರನ್ ಚಚ್ಚಿದರು. ಇದು ಇವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಯಿತು.

12 ಓವರ್ ಗಳವರೆಗೂ ಮುಂಬೈ ಗೆಲ್ಲಬಹುದು ಎಂದು ಬಹುಶಃ ಯಾರೂ ಊಹೆಯೂ ಮಾಡಿರಲಿಲ್ಲ. ಆದರೆ ಹರ್ಮನ್ ಪ್ರೀತ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಅಂತಿಮವಾಗಿ ಮುಂಬೈ 19.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 191 ರನ್ ಗಳಿಸುವ ಮೂಲಕ ಅದ್ಭುತ ಗೆಲುವು ದಾಖಲಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ರೋಹಿತ್ ಶರ್ಮಾ ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್: ಹೊಗಳಿದ ಕೋಚ್ ದ್ರಾವಿಡ್