Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2024: ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಆರ್ ಸಿಬಿ ಪ್ಲೇ ಆಫ್

WPL 2024

Krishnaveni K

ದೆಹಲಿ , ಬುಧವಾರ, 13 ಮಾರ್ಚ್ 2024 (09:15 IST)
ದೆಹಲಿ: ಡಬ್ಲ್ಯುಪಿಎಲ್ ರಲ್ಲಿ ಕೊನೆಗೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ ಸಿಬಿ ಇದೀಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇದರೊಂದಿಗೆ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಗಳ ಗೆಲುವು ಕಂಡ ಆರ್ ಸಿಬಿ ಅಂಕಪಟ್ಟಿಯಲ್ಲಿ ಮೂರನೆಯ ಸ್ಥಾನಕ್ಕೇರಿತು. ಆರ್ ಸಿಬಿಗೆ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ಅಧಿಕೃತವಾಗಿ ಕೂಟದಿಂದ ಹೊರನಡೆಯಿತು. ಕಳೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಒಂದು ರನ್ ನಿಂದ ಸೋತಿದ್ದ ಆರ್ ಸಿಬಿಗೆ ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ.

ಈ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಡಬ್ಲ್ಯುಪಿಎಲ್ ಕೂಟದಲ್ಲೇ ಶ್ರೇಷ್ಠ ಬೌಲಿಂಗ್ ದಾಖಲೆ ನಿರ್ಮಿಸಿದ ಎಲ್ಲಿಸ್ ಪೆರ್ರಿ 6 ವಿಕೆಟ್ ಕಬಳಿಸಿ ಮಿಂಚಿದರು. ಬಳಿಕ ಬ್ಯಾಟಿಂಗ್ ನಲ್ಲೂ 40 ರನ್ ಸಿಡಿಸಿ ಕೊನೆಯವರೆಗೂ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಕಳೆದ ಪಂದ್ಯದ ಹೀರೋ ರಿಚಾ ಘೋಷ್ ಅಜೇಯ 36 ರನ್ ಗಳಿಸಿದರು.

ಈ ಮೂಲಕ ಆರ್ ಸಿಬಿ ಪ್ರಬಲ ಮುಂಬೈ ವಿರುದ್ಧ ಮೊದಲ ಬಾರಿಗೆ ಗೆದ್ದು ಬೀಗಿತು. ಈ ಬಾರಿ ಮುಂಬೈ ಇಂಡಿಯನ್ಸ್ ಗೆ ಇದು 8 ಪಂದ್ಯಗಳಿಂದ ಮೂರನೇ ಸೋಲಾಗಿದೆ. ಒಟ್ಟು 5 ಪಂದ್ಯ ಗೆದ್ದಿರುವ ಮುಂಬೈ ಈಗ ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಅತ್ತ ಆರ್ ಸಿಬಿ 8 ಪಂದ್ಯಗಳಿಂದ 4 ಪಂದ್ಯ ಗೆದ್ದು ಮೂರನೇ ಸ್ಥಾನದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೂಂನಲ್ಲಿ ಒಬ್ಬನೇ ಅಳುತ್ತಿದ್ದಾಗ ರೋಹಿತ್ ಶರ್ಮಾ ಮಾಡಿದ ಸಹಾಯ ಮರೆಯಲ್ಲ: ರವಿಚಂದ್ರನ್ ಅಶ್ವಿನ್