Select Your Language

Notifications

webdunia
webdunia
webdunia
webdunia

WPL 2026: ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಫೈನಲ್ ಗೆ ಆರ್ ಸಿಬಿ

RCB Women team
Photo Credit: X
ವಡೋದರಾ: ಡಬ್ಲ್ಯುಪಿಎಲ್ 2026 ರಲ್ಲಿ ಯುಪಿ ವಾರಿಯರ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ ಎರಡನೇ ಬಾರಿಗೆ ಫೈನಲ್ ಗೇರಿದೆ.

2024 ರಲ್ಲಿ ಆರ್ ಸಿಬಿ ಫೈನಲ್ ಗೇರಿ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಆಗ ಪ್ಲೇ ಆಫ್ ಹಂತದಲ್ಲಿ ಗೆದ್ದು ಫೈನಲ್ ಗೇರಿತ್ತು. ಆದರೆ ಈ ಬಾರಿ ಆರ್ ಸಿಬಿ ಮತ್ತಷ್ಟು ಸುಧಾರಿತ ಪ್ರದರ್ಶನ ನೀಡಿದೆ. ಲೀಗ್ ಪಂದ್ಯಗಳಲ್ಲೇ ಅತೀ ಹೆಚ್ಚು ಅಂಕ ಸಂಪಾದಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದಿದೆ.

ನಿನ್ನೆಯ ಪಂದ್ಯದಲ್ಲಿ ಯುಪಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತ್ತು.  ಈ ಮೊತ್ತ ಬೆನ್ನತ್ತಿದ್ದ ಆರ್ ಸಿಬಿ ಪರ ನಡಿನ್ ಡಿ ಕ್ಲರ್ಕ್ ಅಬ್ಬರದ ಇನಿಂಗ್ಸ್ ಆಡಿ 37 ಎಸೆತಗಳಿಂದ 75 ರನ್ ಸಿಡಿಸಿದರು. ನಡಿನ್ ಕ್ರೀಸ್ ನಲ್ಲಿರುವವರೆಗೂ ನಿಧಾನಗತಿಯಲ್ಲಿ ಆಡುತ್ತಿದ್ದ ನಾಯಕಿ ಸ್ಮೃತಿ ಮಂಧಾನ ಅವರು ಔಟಾಗುತ್ತಿದ್ದಂತೇ ಗೇರ್ ಬದಲಾಯಿಸಿದರು. ನಂತರ ಅವರೂ ಹೊಡೆಬಡಿಯ ಆಟಕ್ಕೆ ಕೈ ಹಾಕಿ ಅಂತಿಮವಾಗಿ 27 ಎಸೆತಗಳಿಂದ 54 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಆರ್ ಸಿಬಿ 13.1 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ನೇರವಾಗಿ ಫೈನಲ್ ಗೆ ಲಗ್ಗೆಯಿಟ್ಟಿತು.

Share this Story:

Follow Webdunia kannada

ಮುಂದಿನ ಸುದ್ದಿ

WPL 2026: ಆರ್ ಸಿಬಿಗೆ ಮತ್ತೆ ಆಪತ್ಬಾಂಧವರಾದ ನಡಿನ್ ಡಿ ಕ್ಲರ್ಕ್