Daily Horoscope

Select Your Language

Notifications

webdunia
webdunia
webdunia
webdunia

WPL 2026: ಆರ್ ಸಿಬಿಗೆ ಇಂದು ಫೈನಲ್ ಗೇರುವ ಭರ್ಜರಿ ಅವಕಾಶ

RCB Women team
ವಡೋದರಾ: ಡಬ್ಲ್ಯುಪಿಎಲ್ 2026 ರಲ್ಲಿ ಇಂದು ಯುಪಿ ವಾರಿಯರ್ಸ್ ವಿರುದ್ಧ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೈನಲ್ ಗೇರುವ ಭರ್ಜರಿ ಅವಕಾಶವಿದೆ.

ಈ ಕೂಟದಲ್ಲಿ ಆರ್ ಸಿಬಿ ಮಹಿಳೆಯರು ಭರ್ಜರಿ ಪ್ರದರ್ಶನವನ್ನೇ ನೀಡಿದ್ದಾರೆ. ಕಳೆದ ಎರಡು ಪಂದ್ಯಗಳನ್ನು ಸತತವಾಗಿ ಸೋತಿದ್ದು ಬಿಟ್ಟರೆ ಒಟ್ಟು 5 ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಆರ್ ಸಿಬಿ ಎಲಿಮಿನೇಟರ್ ಭಯವಿಲ್ಲದೇ ನೇರವಾಗಿ ಫೈನಲ್ ಗೇರಬಹುದಾಗಿದೆ.

ಅದಕ್ಕಾಗಿ ಇಂದಿನ ಪಂದ್ಯ ಆರ್ ಸಿಬಿ ಪಾಲಿಗೆ ಮಹತ್ವದ್ದಾಗಿದೆ. ಇಂದು ದುರ್ಬಲ ಯುಪಿ ವಾರಿಯರ್ಸ್ ವಿರುದ್ಧ ಆರ್ ಸಿಬಿ ಕಣಕ್ಕಿಳಿಯಲಿದೆ. ಅಂಕಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ಯುಪಿ ಈಗಾಗಲೇ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಹೀಗಾಗಿ ಆರ್ ಸಿಬಿಗೆ ಮತ್ತೆ ಗೆಲುವಿನ ಹಳಿಗೆ ಬರಲು ಇದು ಉತ್ತಮ ವೇದಿಕೆಯಾಗಿದೆ.

ಆರ್ ಸಿಬಿಗೆ ಕಳೆದ ಎರಡು ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟಿಗರು ಕೈ ಕೊಟ್ಟಿದ್ದಾರೆ. ಮುಂದಿನ ಹಂತದಲ್ಲಿ ಬ್ಯಾಟಿಂಗ್ ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮತ್ತೆ ಆರ್ ಸಿಬಿ ಬ್ಯಾಟಿಗರು ಫಾರ್ಮ್ ಗೆ ಬರುವ ಅಗತ್ಯವಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್ ಗೂ ಬಂದಿತ್ತು ಸಿನಿಮಾ ಆಫರ್: ಆಕೆ ಹೇಳಿದ್ದು ಇದೊಂದೇ ಮಾತು