Publish Date: Thu, 29 Jan 2026 (10:17 IST)
Updated Date: Thu, 29 Jan 2026 (10:21 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಕನ್ನಡತಿ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಗೂ ಸಾಕಷ್ಟು ಸಿನಿಮಾ ಆಫರ್ ಗಳು ಬಂದಿತ್ತಂತೆ. ಆದರೆ ಅವರಿಗೆಲ್ಲಾ ಆಕೆ ಹೇಳಿದ್ದು ಇದೊಂದೇ ಮಾತು.
ಡಬ್ಲ್ಯುಪಿಎಲ್ ಟೂರ್ನಿ ನಡುವೆ ಆರ್ ಸಿಬಿ ಕಾಮಿಡಿ ಕಂಟೆಂಟ್ ಕ್ರಿಯೇಟರ್ ಮಿಸ್ಟರ್ ನಾಗ್ಸ್ ಜೊತೆಗಿನ ಚಿಟ್ ಚ್ಯಾಟ್ ನಲ್ಲಿ ಶ್ರೇಯಾಂಕ ಪಾಟೀಲ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಡ್ಯಾನ್ಸ್ ಹವ್ಯಾಸದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಶ್ರೇಯಾಂಕ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಡ್ಯಾನ್ಸ್ ರೀಲ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಬೌಲರ್ ಮಾತ್ರವಲ್ಲ, ಡ್ಯಾನ್ಸ್ ಮಾಡೋದರಲ್ಲೂ ಆಕೆ ಅತ್ಯುತ್ತಮರೇ.
ಇದೀಗ ಚಿಟ್ ಚ್ಯಾಟ್ ನಲ್ಲಿ ಮಿಸ್ಟರ್ ನಾಗ್ಸ್ ನಿಮ್ಮ ಡ್ಯಾನ್ಸ್ ರೀಲ್ಸ್ ನೋಡಿ ನಿಮಗೆ ಸಿನಿಮಾ ಆಫರ್ ಗಳು ಬಂದಿದ್ದು ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಶ್ರೇಯಾಂಕ, ಯಾಕಿಲ್ಲ? ಸಾಕಷ್ಟು ಆಫರ್ ಬಂದಿತ್ತು. ಈಗಲೂ ಹಲವರು ಕೇಳುತ್ತಲೇ ಇರುತ್ತಾರೆ. ಒಂದು ಡ್ಯಾನ್ಸ್ ಆದರೂ ಮಾಡಿ ಹೋಗಿ ಎಂದು ಕೇಳುತ್ತಾರೆ. ಆದರೆ ಅವರಿಗೆಲ್ಲಾ ನಾನು ಸ್ವಲ್ಪ ದಿನ ಕ್ರಿಕೆಟ್ ಮೈದಾನದಲ್ಲಿ ಸಾಧನೆ ಮಾಡ್ತೀನಿ. ಅದಾದ ಮೇಲೆ ನೋಡೋಣ ಎಂದು ಹೇಳುತ್ತೇನೆ ಎಂದಿದ್ದಾರೆ.