Publish Date: Sat, 17 Jan 2026 (09:33 IST)
Updated Date: Sat, 17 Jan 2026 (09:36 IST)
ಮುಂಬೈ: ಡಬ್ಲ್ಯುಪಿಎಲ್ 2026 ರಲ್ಲಿ ನಿನ್ನೆ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದ ಆರ್ ಸಿಬಿ ವನಿತೆಯರು ಅಂಕ ಪಟ್ಟಿಯಲ್ಲಿ ನಂ1 ಸ್ಥಾನ ಭದ್ರಪಡಿಸಿದ್ದು ಇಂದು ಮತ್ತೊಂದು ಪಂದ್ಯವಾಡಲು ಸಿದ್ಧರಾಗಿದ್ದಾರೆ.
ಆರ್ ಸಿಬಿ ಇದುವರೆಗೆ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿದ್ದು ಮೂರೂ ಪಂದ್ಯಗಳಲ್ಲಿ ಗೆಲುವು ಸಿಕ್ಕಿದೆ. ಇದರೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯಕ್ಕೆ ಅಂಕ ಮತ್ತು ನೆಟ್ ರನ್ ರೇಟ್ ಎರಡರಲ್ಲಿಯೂ ಆರ್ ಸಿಬಿ ನಂ1 ಆಗಿದೆ.
ನಿನ್ನೆಯ ಪಂದ್ಯದಲ್ಲಂತೂ ಆರ್ ಸಿಬಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲೂ ಅದ್ಭುತ ಪ್ರದರ್ಶನ ನೀಡಿತ್ತು. ಕನ್ನಡತಿ ಶ್ರೇಯಾಂಕ ಪಾಟೀಲ್ 5 ವಿಕೆಟ್ ಕಬಳಿಸಿ ಮಿಂಚಿದರು. ಲಾರೆನ್ಸ್ ಬೆಲ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಬೌಲಿಂಗ್ ಎಷ್ಟು ಸ್ಟ್ರಾಂಗ್ ಆಗಿದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು.
ಇಂದು ಆರ್ ಸಿಬಿ ಮತ್ತೊಂದು ಪಂದ್ಯವಾಡಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲೂ ಗೆದ್ದು ತನ್ನ ಆಧಿಪತ್ಯ ಮುಂದುವರಿಸುವ ಉತ್ಸಾಹದಲ್ಲಿ ಆರ್ ಸಿಬಿಯಿದೆ. ಇಂದಿನ ಪಂದ್ಯವೂ ಸಂಜೆ 7.30 ಕ್ಕೆ ಆರಂಭವಾಗುವುದು.