Publish Date: Fri, 16 Jan 2026 (10:30 IST)
Updated Date: Fri, 16 Jan 2026 (10:38 IST)
ಮುಂಬೈ: ಡಬ್ಲ್ಯುಪಿಎಲ್ 2026 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುಜರಾತ್ ಜೈಂಟ್ಸ್ ರೂಪದಲ್ಲಿ ಕಠಿಣ ಎದುರಾಳಿ ಮುಖಾಮುಖಿಯಾಗಲಿದೆ.
ಗುಜರಾತ್ ಜೈಂಟ್ಸ್ ಈ ಬಾರಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದೆ. ವಿಶೇಷವಾಗಿ ಆರ್ ಸಿಬಿಯಿಂದಲೇ ವಲಸೆ ಹೋಗಿರುವ ಸೋಫಿ ಡಿವೈನ್ ತಂಡಕ್ಕೆ ಪ್ರಬಲ ಶಕ್ತಿಯಾಗಿದ್ದಾರೆ. ಹೀಗಾಗಿ ಆರ್ ಸಿಬಿಗೆ ಇಂದು ಗೆಲುವು ಅಷ್ಟು ಸುಲಭವಲ್ಲ.
ಹಾಗಿದ್ದರೂ ಕಳೆದ ಎರಡೂ ಪಂದ್ಯಗಳಲ್ಲಿ ಆರ್ ಸಿಬಿ ಪ್ರದರ್ಶನ ಅದ್ಭುತವಾಗಿತ್ತು. ಬೌಲಿಂಗ್ ಮತ್ತು ಬ್ಯಾಟಿಂಗ್, ಫೀಲ್ಡಿಂಗ್ ನಲ್ಲೂ ಒಬ್ಬರಲ್ಲಾ ಒಬ್ಬರು ತಂಡಕ್ಕೆ ಆಧಾರವಾಗುತ್ತಿರುವುದು ಸ್ಮೃತಿ ಪಡೆಗೆ ಪ್ಲಸ್ ಪಾಯಿಂಟ್. ವಿಶೇಷವಾಗಿ ಸ್ಮೃತಿ ಮಂಧಾನ-ಹ್ಯಾರಿಸ್ ಉತ್ತಮ ಆರಂಭ ನೀಡುತ್ತಿದ್ದಾರೆ.
ಆರ್ ಸಿಬಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೊಂಚ ತಲೆನೋವಾಗಿದೆ. ಆದರೆ ಕೆಳ ಕ್ರಮಾಂಕದಲ್ಲಿ ನಡಿನ್ ಡಿ ಕ್ಲರ್ಕ್, ರಿಚಾ ಘೋಷ್ ತಂಡದ ಶಕ್ತಿಯಾಗಿದ್ದಾರೆ. ಇಂದಿನ ಪಂದ್ಯಕ್ಕೆ ಬದಲಾವಣೆ ಸಾಧ್ಯತೆಯಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.