Select Your Language

Notifications

webdunia
webdunia
webdunia
webdunia

ವಿಶ್ವಕಪ್ ಫೈನಲ್: ಕೈ ಜಾರಿ ಹೋಯ್ತು ಕಪ್, ಅಭಿಮಾನಿಗಳ ಹೃದಯ ಚೂರು ಚೂರು

ವಿಶ್ವಕಪ್ ಫೈನಲ್: ಕೈ ಜಾರಿ ಹೋಯ್ತು ಕಪ್, ಅಭಿಮಾನಿಗಳ ಹೃದಯ ಚೂರು ಚೂರು
ಅಹಮ್ಮದಾಬಾದ್ , ಭಾನುವಾರ, 19 ನವೆಂಬರ್ 2023 (21:22 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದ ಕೋಟ್ಯಾಂತರ ಭಾರತೀಯರ ಕನಸು ಚೂರು ಚೂರಾಗಿದೆ.

ಮತ್ತೊಮ್ಮೆ ಆಸ್ಟ್ರೇಲಿಯಾ ಎದುರು ಫೈನಲ್ ನಲ್ಲಿ ಸೋತು ಮಂಡಿಯೂರಿ ಕುಳಿತಿದೆ. ಆರಂಭದಿಂದಲೂ ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ತಂಡಗಳಿಗೆ ಸೋಲುಣಿಸುತ್ತಲೇ ಬಂದಿದ್ದ ಟೀಂ ಇಂಡಿಯಾ ಬೇಕಾಗಿದ್ದಾಗಲೇ ಎಲ್ಲಾ ವಿಭಾಗಗಳಲ್ಲೂ ಕೈಕೊಟ್ಟು ಕ್ರಿಕೆಟ್ ಪ್ರೇಮಿಗಳ ಕನಸು ಭಗ್ನಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಗಳಿಸಿದ್ದು ಕೇವಲ 240 ರನ್. ಗೆಲುವಿಗೆ ಕೇವಲ 241 ರನ್ ಗಳಿಸಬೇಕಿದ್ದರೂ ಭಾರತೀಯ ಬೌಲರ್ ಗಳ ಮೇಲೆ ವಿಶ್ವಾಸವಿತ್ತು. ಯಾಕೆಂದರೆ ಇದೇ ಟೂರ್ನಿಯಲ್ಲಿ ಇದಕ್ಕಿಂತ ಮೊದಲು ಈ ರೀತಿ ಸಣ್ಣ ಮೊತ್ತವನ್ನೂ ಟೀಂ ಇಂಡಿಯಾ ಯಶಸ್ವಿಯಾಗಿ ರಕ್ಷಿಸಿಕೊಂಡಿತ್ತು.

ಆದರೆ ಇಂದು ಹಾಗೆ ಆಗಲೇ ಇಲ್ಲ. ವಿಶ್ವಕಪ್ ಗೆಲ್ಲುವುದು ಕಲೆ ಆಗಿದ್ದರೆ ಆ ಕಲೆಯಲ್ಲಿ ತಾವು ಮಾಸ್ಟರ್ ಎಂಬುದನ್ನು ಆಸ್ಟ್ರೇಲಿಯಾ ಮತ್ತೊಮ್ಮೆ ನಿರೂಪಿಸಿತು. 43 ಓವರ್ ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿದ ಆಸ್ಟ್ರೇಲಿಯಾ 6 ವಿಕೆಟ್ ಗಳ ಜಯ ಗಳಿಸಿ ಆರನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಸ್ಟೇಡಿಯಂನಲ್ಲಿದ್ದ ಲಕ್ಷಾಂತರ ಪ್ರೇಕ್ಷಕರು ಮೌನಕ್ಕೆ ಜಾರುವಂತೆ ಮಾಡಿತು. ನಿನ್ನೆಯಷ್ಟೇ ಆಸೀಸ್ ನಾಯಕ ಪ್ಯಾಟ್ ಕ್ಯುಮಿನ್ಸ್ ಮೈದಾನದಲ್ಲಿರುವ ಲಕ್ಷಾಂತರ ಭಾರತೀಯ ಪ್ರೇಕ್ಷಕರ ಸದ್ದಡಗಿಸುವ ಮಜವೇ ಬೇರೆ ಎಂದಿದ್ದರು. ನುಡಿದಂತೆ ನಡೆಯುವ ಮೂಲಕ ಎಲ್ಲರ ನಿರೀಕ್ಷೆಯನ್ನು ಆಸೀಸ್ ತಲೆಕೆಳಗೆ ಮಾಡಿತು. ಆಸೀಸ್ ಪರ ಶತಕ ಸಿಡಿಸಿದ ಟ್ರಾವಿಸ್ ಹೆಡ್ 137 ರನ್ ಚಚ್ಚಿದರು. ಲಬುಶೇನ್ ಅಜೇಯ 58 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಫೈನಲ್: ವಿರಾಟ್ ಕೊಹ್ಲಿಗೆ ಮೈದಾನದಲ್ಲೇ ವಿಶೇಷ ಉಡುಗೊರೆ ಕೊಟ್ಟ ಸಚಿನ್ ತೆಂಡುಲ್ಕರ್