Publish Date: Thu, 05 Mar 2020 (11:10 IST)
Updated Date: Thu, 05 Mar 2020 (11:12 IST)
ಸಿಡ್ನಿ: ಮಳೆಯಿಂದಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದ್ದು, ಭಾರತ ಮಹಿಳಾ ತಂಡ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದಿದೆ.
ಇಂದು ಸಿಡ್ನಿಯಲ್ಲಿ ಬೆಳಗ್ಗಿನಿಂದಲೇ ಮಳೆ ಸುರಿಯತ್ತಿದ್ದರಿಂದ ಟಾಸ್ ಕೂಡಾ ಆಗಲಿಲ್ಲ. ಈ ನಡುವೆ ಲೀಗ್ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಂಕಗಳ ಆಧಾರದಲ್ಲಿ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ಭಾರತ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದಿದೆ.
ಇದೀಗ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ಮುಖಾಮುಖಿಯಾಗಲಿದ್ದು, ಒಂದು ವೇಳೆ ಈ ಪಂದ್ಯವೂ ಮಳೆಗೆ ರದ್ದಾದರೆ ಬಿ ಗುಂಪಿನಲ್ಲಿ ಅಗ್ರ ಸ್ಥಾನಿಯಾಗಿರುವ ದ.ಆಫ್ರಿಕಾ ಫೈನಲ್ ಗೇರಲಿದೆ. ಇದೂ ಕೂಡಾ ಭಾರತಕ್ಕೆ ಲಾಭವೇ ಆಗಲಿದೆ.