Publish Date: Thu, 05 Mar 2020 (09:53 IST)
Updated Date: Thu, 05 Mar 2020 (09:54 IST)
ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದು, ಇನ್ನೂ ಟಾಸ್ ಕೂಡಾ ನಡೆದಿಲ್ಲ. ಮಳೆಯಿಂದಾಗಿ ಟಾಸ್ ತಡವಾಗಲಿದೆ.
ಒಂದು ವೇಳೆ ಮಳೆಯಿಂದಾಗಿ ಇಂದಿಡೀ ಆಟ ರದ್ದಾದರೆ ಭಾರತಕ್ಕೆ ಲಾಭವಾಗಲಿದ್ದು, ನೇರವಾಗಿ ಫೈನಲ್ ಗೇರಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಮಳೆ ಸುರಿಯುತ್ತಲೇ ಇದ್ದು, ಪಂದ್ಯಕ್ಕೆ ಸಂಪೂರ್ಣ ಅಡ್ಡಿಯಾಗಿದೆ.
ಕನಿಷ್ಠ 10 ಓವರ್ ಗಳ ಪಂದ್ಯ ನಡೆಯಲು ಸಾಧ್ಯವಾದರೂ ಪಂದ್ಯ ನಡೆಯಲಿದೆ. ಆದರೆ ಇಲ್ಲವಾದರೆ ಪಂದ್ಯ ರದ್ದಾಗಿ ಅಂಕಗಳ ಆಧಾರದಲ್ಲಿ ಭಾರತ ಫೈನಲ್ ಗೇರಲಿದೆ. ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ-ದ.ಆಫ್ರಿಕಾ ನಡುವೆ ನಡೆಯಲಿದ್ದು, ಈ ಪಂದ್ಯಕ್ಕೂ ಮಳೆ ಬಂದರೆ ಆಸ್ಟ್ರೇಲಿಯಾ ಫೈನಲ್ ಗೇರಲಿದೆ.