Select Your Language

Notifications

webdunia
webdunia
webdunia
webdunia

ಭಾರತದಲ್ಲಿ ನೋಡಿಕೊಳ್ತೀನಿ ಎಂದಿದ್ದ ವಿರಾಟ್ ಕೊಹ್ಲಿಯನ್ನು ಕಿಚಾಯಿಸಿದ ಆಸೀಸ್ ವೇಗಿ

ಭಾರತದಲ್ಲಿ ನೋಡಿಕೊಳ್ತೀನಿ ಎಂದಿದ್ದ ವಿರಾಟ್ ಕೊಹ್ಲಿಯನ್ನು ಕಿಚಾಯಿಸಿದ ಆಸೀಸ್ ವೇಗಿ
ಮುಂಬೈ , ಗುರುವಾರ, 5 ಮಾರ್ಚ್ 2020 (09:35 IST)
ಮುಂಬೈ: ನ್ಯೂಜಿಲೆಂಡ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸುತ್ತಿದ್ದಾಗ ಮೈದಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಇವರು ಭಾರತಕ್ಕೆ ಬಂದಾಗ ನೋಡಿಕೊಳ್ಳುವೆ’ ಎಂದಿದ್ದರು. ಈ ಹೇಳಿಕೆಗೆ ಇದೀಗ ಆಸೀಸ್ ವೇಗಿ ಮಿಚೆಲ್ ಜಾನ್ಸನ್ ಲೇವಡಿ ಮಾಡಿದ್ದಾರೆ.


ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಕೊಹ್ಲಿಯ ಈ ಹೇಳಿಕೆಯ ಜತೆಗೆ ಫೋಟೋ ಪ್ರಕಟಿಸಿರುವ ಜಾನ್ಸನ್ ಜತೆಗೊಂದು ವಯಲಿನ್ ಬೇಸರದ ಹಾಡು ನುಡಿಸುವ ಫೋಟೋವನ್ನೂ ಲಗತ್ತಿಸಿ ಲೇವಡಿ ಮಾಡಿದ್ದಾರೆ. ಈ ಹೇಳಿಕೆ ನೋಡಿದರೆ ನನಗೆ ನಗು ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

ಆದರೆ ಜಾನ್ಸನ್ ಮಾಡಿರುವ ಲೇವಡಿಗೆ ತಿರುಗೇಟು ಕೊಟ್ಟಿರುವ ಭಾರತೀಯರು 2014 ರ ಭಾರತೀಯ ಪ್ರವಾಸವನ್ನು ನೆನಪಿಸಿದ್ದಾರೆ. ಅಲ್ಲದೆ ಹಲವರು ಜಾನ್ಸನ್ ಗೆ ತಿರುಗೇಟು ನೀಡಿದ್ದಾರೆ. ಆದರೆ ಇದಕ್ಕೂ ಜಾನ್ಸನ್ ಪ್ರತಿಕ್ರಿಯಿಸಿದ್ದು, ಲಾಫಿಂಗ್ ಇಮೋಜಿ ಮೂಲಕ ಕೊಹ್ಲಿ ಅಭಿಮಾನಿಗಳನ್ನೂ ಕಿಚಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಷೇಷನ್ ಆಗಿರುವ ಭಾರತೀಯ ಮಹಿಳಾ ಆಟಗಾರ್ತಿ ಶಿಫಾಲಿ ವರ್ಮ ಸಾಹಸಗಾಥೆ ನಿಮಗೆ ಗೊತ್ತಾ?