ಬೆಂಗಳೂರು: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಿಕರು ಬದಲಾವಣೆಯಾಗುವುದು ಖಚಿತವಾಗಿದೆ. ಆದರೆ ಮಾಲಿಕರ ಜೊತೆ ತಂಡದ ಹೆಸರೂ ಬದಲಾಗಬಹುದಾ? ಹೀಗೊಂದು ಪ್ರಶ್ನೆಯನ್ನು ಕ್ರಿಕೆಟ್ ವಿಮರ್ಶಕ ಆಕಾಶ್ ಚೋಪ್ರಾ ಎತ್ತಿದ್ದರು.
ಆರ್ ಸಿಬಿ ಎನ್ನುವ ಹೆಸರು ಅಭಿಮಾನಿಗಳ ಪಾಲಿಗೆ ಒಂದು ಇಮೋಷನ್. ಮೈದಾನದಲ್ಲಿ ತಮ್ಮ ತಂಡ ಆಡುವಾಗ ಆರ್ ಸಿಬಿ.. ಆರ್ ಸಿಬಿ ಎನ್ನುವ ಘೋಷಣೆ ಆಟಗಾರರಲ್ಲೂ ಹೊಸ ಉತ್ಸಾಹವುಂಟು ಮಾಡುತ್ತದೆ. ಆದರೆ ಈಗ ಮಾಲಿಕರು ಬದಲಾವಣೆಯಾದರೆ ಹೆಸರೂ ಬದಲಾವಣೆಯಾಗಬಹುದಾ ಎಂಬ ಪ್ರಶ್ನೆ ಮೂಡಿದೆ.
ಈ ಮೊದಲು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮಾಲಿಕರ ಬದಲಾವಣೆಯಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆಗಿತ್ತು. ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ತಂಡದ ಹೆಸರುಗೂ ಬದಲಾವಣೆಯಾಗಿದ್ದು ಇದೆ. ಆದರೆ ಆರ್ ಸಿಬಿ ಹೆಸರಿನಲ್ಲಿ ಬ್ಯಾಂಗಲೂರು ಹೋಗಿ ಬೆಂಗಳೂರು ಎಂದು ಆಗಿದ್ದು ಬಿಟ್ಟರೆ ಯಾವುದೇ ಬದಲಾವೆಯಾಗಿರಲಿಲ್ಲ.
ಆದರೆ ಮಾಲಿಕರು ಬದಲಾವಣೆಯಾದರೂ ತಂಡದ ಹೆಸರು ಮಾತ್ರ ಬದಲಾವಣೆ ಮಾಡಬೇಡಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಮಲ್ಯ ತಂಡವನ್ನು ಸೇಲ್ ಮಾಡಿ ಯುನೈಟೆಡ್ ಸ್ಪಿರಿಟ್ಸ್ ಖರೀದಿ ಮಾಡಿದಾಗಲೂ ತಂಡದ ಹೆಸರು ಬದಲಾಯಿಸಿರಲಿಲ್ಲ. ಈಗ ಹೊಸ ಮಾಲಿಕರೂ ತಂಡದ ಹೆಸರು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.