Publish Date: Tue, 22 Aug 2023 (08:10 IST)
Updated Date: Tue, 22 Aug 2023 (08:19 IST)
ಮುಂಬೈ: ಏಷ್ಯಾ ಕಪ್ 2023 ಗೆ ನಿನ್ನೆ ಟೀಂ ಇಂಡಿಯಾ 17 ಸದಸ್ಯರ ಪಟ್ಟಿ ಪ್ರಕಟವಾಗಿದೆ. ಈ ಆಟಗಾರರ ಜೊತೆ ಮೀಸಲು ಆಟಗಾರನಾಗಿ ಸಂಜು ಸ್ಯಾಮ್ಸನ್ ಕೂಡಾ ಆಯ್ಕೆಯಾಗಿದ್ದಾರೆ. ಇದಕ್ಕೆ ಕಾರಣವೂ ಇದೆ.
ಸಂಜು ಸ್ಯಾಮ್ಸನ್ ರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲು ಕಾರಣ ಕೆಎಲ್ ರಾಹುಲ್! ಎನ್ ಸಿನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಹುಲ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಏಷ್ಯಾ ಕಪ್ ಮೊದಲ ಪಂದ್ಯಕ್ಕಂತೂ ಅವರು ಲಭ್ಯರಿರುವುದಿಲ್ಲ. ಹಾಗಿದ್ದರೂ ಟೂರ್ನಿಯ ಮಧ‍್ಯದಲ್ಲಿ ಅವರು ತಂಡ ಕೂಡಿಕೊಳ್ಳಬಹುದು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಒಂದು ವೇಳೆ ರಾಹುಲ್ ತಂಡಕ್ಕೆ ಬಂದರೆ ಅವರೇ ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಅವರು ಬರುವವರೆಗೆ ಮೊದಲ ಆಯ್ಕೆಯಾಗಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಸಂಜು ಸ್ಯಾಮ್ಸನ್ ಬ್ಯಾಕ್ ಅಪ್ ಆಗಿ ತಂಡದಲ್ಲಿರಲಿದ್ದಾರೆ.