Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಇಂದು ಪ್ರಕಟ: ರೋಹಿತ್ ಶರ್ಮಾ ಭಾಗಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಇಂದು ಪ್ರಕಟ: ರೋಹಿತ್ ಶರ್ಮಾ ಭಾಗಿ
ಮುಂಬೈ , ಸೋಮವಾರ, 21 ಆಗಸ್ಟ್ 2023 (08:20 IST)
ಮುಂಬೈ: ಏಷ್ಯಾ ಕಪ್ ನಲ್ಲಿ ಭಾಗಿಯಾಗಲಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ ಇಂದು ಪ್ರಕಟವಾಗಲಿದೆ. ಬಿಸಿಸಿಐ ಆಯ್ಕೆಗಾರರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಕೂಡಾ ಭಾಗಿಯಾಗುವ ನಿರೀಕ್ಷೆಯಿದೆ. ಈಗಾಗಲೇ ದ್ರಾವಿಡ್ ಜೊತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತುಕತೆ ನಡೆಸಿದ್ದರು.

ರೋಹಿತ್ ಶರ್ಮಾ ನೇತೃತ್ವದಲ್ಲಿ ಪ್ರಬಲ ಪಡೆಯನ್ನೇ ಆಯ್ಕೆ ಮಾಡಲಾಗುತ್ತದೆ. ಇದುವರೆಗೆ ನಡೆದ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಿಲಕ್ ವರ್ಮ, ಯಶಸ್ವಿ ಜೈಸ್ವಾಲ್ ಗೂ ಅವಕಾಶದ ಭರವಸೆಯಿದೆ. ಆದರೆ ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್ ಮುಂತಾದವರಿಗೆ ಅವಕಾಶದ ಸಾಧ‍್ಯತೆ ಕಡಿಮೆ. ಕೆಎಲ್ ರಾಹುಲ್ ಜೊತೆ ಶ್ರೇಯಸ್ ಅಯ್ಯರ್ ಕೂಡಾ ತಂಡಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಹೀಗಾಗದಲ್ಲಿ ಇಶಾನ್ ಕಿಶನ್ ಗೂ ಅವಕಾಶ ಸಾಧ‍್ಯತೆ ಕಡಿಮೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಐರ್ಲೆಂಡ್ ಟಿ20 ಸರಣಿ ಟೀಂ ಇಂಡಿಯಾ ಪಾಲು