ಮುಂದಿನ ಐಪಿಎಲ್ ಗೆ ಕೆಎಲ್ ರಾಹುಲ್ ಆರ್ ಸಿಬಿಗೆ ಈ ಕಾರಣಕ್ಕೆ ಬರಲೇಬೇಕು

Krishnaveni K
ಗುರುವಾರ, 16 ಮೇ 2024 (14:12 IST)
ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮುಂದಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಬೇಕು ಎಂದು ಅಭಿಮಾನಿಗಳ ಒತ್ತಾಯ ಕೇಳಿಬರುತ್ತಿದೆ.

ಕೆಎಲ್ ರಾಹುಲ್ ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಆದರೆ ಇತ್ತೀಚೆಗೆ ಮಾಲಿಕ ಸಂಜೀವ್ ಗೊಯೆಂಕಾ ಜೊತೆಗಿನ ವೈಮನಸ್ಯದಿಂದಾಗಿ ರಾಹುಲ್ ಮುಂದಿನ ಸೀಸನ್ ಗೆ ಬೇರೆ ತಂಡ ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ಕನ್ನಡಿಗ ಬ್ಯಾಟಿಗನನ್ನು ಆರ್ ಸಿಬಿಗೆ ಬರುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಆರ್ ಸಿಬಿಗೆ ಈಗ ಕೆಎಲ್ ರಾಹುಲ್ ರಂತಹ ಆಟಗಾರನ ಅಗತ್ಯ ತುಂಬಾ ಇದೆ. ಯಾಕೆಂದರೆ ಈ ಸೀಸನ್ ನಲ್ಲಿ ಫಾ ಡು ಪ್ಲೆಸಿಸ್ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದಿತ್ತು. ಆರ್ ಸಿಬಿಗೆ ಸಮರ್ಥ ನಾಯಕನ ಅಗತ್ಯವಿದೆ ಎಂಬ ಕೂಗು ಕೇಳಿಬರುತ್ತಿದೆ. ಹೀಗಾಗಿ ರಾಹುಲ್ ತಂಡಕ್ಕೆ ಬಂದರೆ ಅವರು ನಾಯಕತ್ವ ವಹಿಸಿಕೊಳ್ಳಬಲ್ಲರು.

ಇನ್ನೊಂದೆಡೆ ಇದುವರೆಗೆ ತಂಡದ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಗೆ ಇದೇ ಕೊನೆಯ ಐಪಿಎಲ್. ಹೀಗಾಗಿ ಮುಂದಿನ ಸೀಸನ್ ನಲ್ಲಿ ಆರ್ ಸಿಬಿ ಸಮರ್ಥ ವಿಕೆಟ್ ಕೀಪರ್ ಬ್ಯಾಟಿಗನನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಜೊತೆಗೆ ಆರ್ ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ‍್ಯವೇ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಈ ಎಲ್ಲಾ ಕೊರತೆ ನಿಭಾಯಿಸಲು ಕೆಎಲ್ ರಾಹುಲ್ ತಂಡಕ್ಕೆ ಬರಬೇಕಾದ ಅವಶ್ಯಕತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡ್ತೀನಿ ಆದ್ರೆ ಒಂದು ಷರತ್ತು: ಮೊಹ್ಸಿನ್ ನಖ್ವಿ ಕೊಬ್ಬು ಎಷ್ಟಿದೆ ನೋಡಿ

ಮೂವರು ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿದ ಬಿಸಿಸಿಐ: ಇದೆಂಥಾ ಅನ್ಯಾಯ

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

ಮುಂದಿನ ಸುದ್ದಿ
Show comments