ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

Krishnaveni K
ಮಂಗಳವಾರ, 16 ಡಿಸೆಂಬರ್ 2025 (08:48 IST)
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಪ್ರಸಕ್ತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಟಿ20 ಸರಣಿಯನ್ನು ಅರ್ಧಕ್ಕೇ ಬಿಟ್ಟು ದಿಡೀರ್ ಮನೆಗೆ ಮರಳಿರುವುದಕ್ಕೆ ಕಾರಣ ಬಯಲಾಗಿದೆ.

ಜಸ್ಪ್ರೀತ್ ಬುಮ್ರಾ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರು. ಆದರೆ ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಟಾಸ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಅನಿವಾರ್ಯ ಕಾರಣಗಳಿಂದ ಮನೆಗೆ ಮರಳಿದ್ದಾರೆ ಎಂದಿದ್ದರು. ಅದಕ್ಕೀಗ ಕಾರಣ ಬಯಲಾಗಿದೆ.

ಜಸ್ಪ್ರೀತ್ ಬುಮ್ರಾ ಕುಟುಂಬಸ್ಥರೊಬ್ಬರು ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ ಅವರು ಅನಿವಾರ್ಯವಾಗಿ ಮನೆಗೆ ತೆರಳಬೇಕಾಯಿತು. ಅವರಿಗೆ ಈಗ ಕುಟುಂಬವೇ ಪ್ರಮುಖ ಆದ್ಯತೆ. ಒಂದು ವೇಳೆ ಅವರ ಆಪ್ತರು ಚೇತರಿಸಿಕೊಂಡರೆ ಅಹ್ಮದಾಬಾದ್ ನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯದ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಈಗಾಗಲೇ ಆಲ್ ರೌಂಡರ್ ಅಕ್ಸರ್ ಪಟೇಲ್ ಅನಾರೋಗ್ಯದ ರೂಪದಲ್ಲಿ ಟೀಂ ಇಂಡಿಯಾಗೆ ಹೊಡೆತ ಬಿದ್ದಿದೆ. ಇದೀಗ ಬುಮ್ರಾ ಕೂಡಾ ತೆರಳಿದ್ದಾರೆ. ಹಾಗಿದ್ದರೂ ಇವರಿಬ್ಬರ ಅನುಪಸ್ಥಿತಿಯಲ್ಲೂ ಟೀಂ ಇಂಡಿಯಾ ಮೂರನೇ ಟಿ20 ಪಂದ್ಯವನ್ನು ಗೆದ್ದಿತ್ತು ಎನ್ನುವುದನ್ನೂ ಮರೆಯುವಂತಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಎಲ್ಲರೂ ಫುಟ್ಬಾಲ್ ಫೈನಲ್ ನೋಡ್ತಿರುವಾಗ ಮೇಕೆ ಬಂದು ಹೀಗೆ ಮಾಡೋದಾ Video

IND vs ENG: ರೋಹಿತ್ ಶರ್ಮಾ ಔಟಾಗಿ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ Video

FIFA WC: ಅರ್ಜೆಂಟೀನಾ ಗೆಲ್ಲುತ್ತೆ, ಸಂಭ್ರಮಾಚರಣೆ ಮಾಡಲು ಶಾಲೆಗಳಿಗೆ ರಜೆ ಕೊಟ್ಟಿದ್ದ ಕೇರಳ: ಆದ್ರೆ ಆಗಿದ್ದೇ ಬೇರೆ

FIFA World Cup: ಅರ್ಜೆಂಟೀನಾ ನಿರೀಕ್ಷೆಯೆಲ್ಲಾ ಭಗ್ನವಾಯ್ತು: ಸ್ಪೇನ್ ಹೊಸ ವಿಶ್ವಚಾಂಪಿಯನ್

ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಮಜಾ ಸವಿಯಲು ಶಾಲಾ ಕಾಲೇಜುಗಳಿಗೆ ರಜೆ ಸಾರಿದ ಕೇರಳ ಸರ್ಕಾರ

ಮುಂದಿನ ಸುದ್ದಿ
Show comments