ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

Krishnaveni K
ಸೋಮವಾರ, 15 ಡಿಸೆಂಬರ್ 2025 (14:13 IST)
Photo Credit: X
ಧರ್ಮಶಾಲಾ: ಯಾಕೋ ಇತ್ತೀಚೆಗೆ ನೀವು ನಾಯಕರಾದ ಮೇಲೆ ಫಾರ್ಮ್ ಕಳೆದುಕೊಂಡಿದ್ದೀರಿ ಎನಿಸುತ್ತದೆ ಎಂದು ಕೇಳಿದರೆ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅಳಿಯ ಅಲ್ಲ ಮಗಳ ಗಂಡ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ.

ಕಳೆದ 21 ಟಿ20 ಪಂದ್ಯಗಳಿಂದ ಸೂರ್ಯಕುಮಾರ್ ಗಳಿಸಿದ್ದು ಕೇವಲ 239 ರನ್. ಇದರಲ್ಲಿ ಒಮ್ಮೆಯೂ ಅರ್ಧಶತಕ ಕೂಡಾ ದಾಖಲಿಸಿಲ್ಲ. ಕೇವಲ 47 ರನ್ ಗಳಿಸಿದ್ದಷ್ಟೇ ಗರಿಷ್ಠ ಸಾಧನೆ. ಅವರ ಬ್ಯಾಟಿಂಗ್ ಫಾರ್ಮ್ ಈಗ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿದೆ.

ನಿನ್ನೆಯ ಪಂದ್ಯದಲ್ಲೂ ಸೂರ್ಯ ಗಳಿಸಿದ್ದು ಕೇವಲ 12 ರನ್. ಅವರ ಈ ಕಳಪೆ ಫಾರ್ಮ್ ಬಗ್ಗೆ ಪಂದ್ಯದ ನಂತರ ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ಅವರು ‘ನಾನು ಫಾರ್ಮ್ ಕಳೆದುಕೊಂಡಿಲ್ಲ. ಆದರೆ ರನ್ ಗಳಿಸುತ್ತಿಲ್ಲ ಅಷ್ಟೇ’ ಎಂದು ಅಳಿಯ ಅಲ್ಲ ಮಗಳ ಗಂಡ ಎನ್ನುವ ರೀತಿಯ ಉತ್ತರಿಸಿದ್ದಾರೆ.

ಅವರ ಈ ಉತ್ತರಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ನೀವು ಫಾರ್ಮ್ ನಲ್ಲಿದ್ದೀರೋ ಬಿಡ್ತೀರೋ ತಂಡಕ್ಕೆ ಬೇಕಾಗಿರೋದು ರನ್. ಅದನ್ನೇ ಗಳಿಸಿಲ್ಲ ಎಂದ ಮೇಲೆ ಇದ್ದೂ ಏನು ಪ್ರಯೋಜನ ಎಂದು ಟ್ರೋಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾಕ್ಕೆ ಹೊಸ ನಾಯಕ ಬಂದ ಮೇಲೆ ಜಸ್ಪ್ರೀತ್ ಬುಮ್ರಾ ಫಾರ್ಮ್ ಕಳೆದುಕೊಂಡ್ರಾ

WPL 2026: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಕನಸಿಗೆ ಈ ಎರಡು ತಂಡಗಳೇ ಆಸರೆ

IND vs NZ: ನ್ಯೂಜಿಲೆಂಡ್ ವಿರುದ್ಧ ಇಂದು ಟೀಂ ಇಂಡಿಯಾಗೆ ಕೊನೆಯ ಟಿ20 ಪಂದ್ಯ

ಪಂಚೆಯುಟ್ಟುಕೊಂಡು ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಬಂದ ಟೀಂ ಇಂಡಿಯಾ ಕ್ರಿಕೆಟಿಗರು Video

ಪಿಟಿ ಉಷಾ ಪತಿ ಶ್ರೀನಿವಾಸನ್ ಇನ್ನಿಲ್ಲ: ಖುದ್ದು ಕರೆ ಮಾಡಿದ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments