Publish Date: Fri, 08 Jun 2018 (09:05 IST)
Updated Date: Fri, 08 Jun 2018 (09:06 IST)
ಮುಂಬೈ: ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಮೈದಾನದ ಹೊರಗೂ ಉತ್ತಮ ಸ್ನೇಹಿತರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ತಮ್ಮ ಆತ್ಮೀಯ ಗೆಳೆಯನನ್ನು ಭಜಿ, ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಹೋಲಿಸಿದ್ದಾರೆ!
ಭಜಿ ಬ್ಲಾಸ್ಟ್ ಎನ್ನುವ ಶೋನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಜತೆಗೆ ಸಂದರ್ಶನ ನಡೆಸಿದ ಭಜಿ ಯುವರಾಜ್ ಸಿಂಗ್ ರ ವಯಸ್ಸು ಮತ್ತು ಅವರು ಈಗಲೂ ಕ್ರಿಕೆಟ್ ಆಡುತ್ತಿರುವುದಕ್ಕೆ ತಮಾಷೆ ಮಾಡಿದ್ದಾರೆ.
ನಾನು, ಯುವಿ ಅಂಡರ್, 14,16,19 ಕೊನೆಗೆ ಟೀಂ ಇಂಡಿಯಾದಲ್ಲೂ ಜತೆಗೇ ಆಡಿದ್ದೇವೆ. ನಾನು ದಿನ ಕಳೆದಂತೆ ವಯಸ್ಸಾಗುತ್ತಾ ತಂಡದಿಂದ ಮರೆಯಾದೆ. ಆದರೆ ಅವನು ಈಗಲೂ ಆಡುತ್ತಲೇ ಇದ್ದಾನೆ. ಅವನೊಂಥರಾ ಪಾಕಿಸ್ತಾನದ ಶಾಹಿದ್ ಅಫ್ರಿದಿಯಂತೆ’ ಎಂದು ಭಜಿ ಯುವಿ ಬಗ್ಗೆ ತಮಾಷೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.