Publish Date: Thu, 07 Jun 2018 (09:12 IST)
Updated Date: Thu, 07 Jun 2018 (09:13 IST)
ಮುಂಬೈ: ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಇಬ್ಬರೂ ಒಂದೇ ರಾಜ್ಯದಿಂದ ಬಂದ ಕ್ರಿಕೆಟಿಗರು. ಇವರಿಬ್ಬರೂ ಟೀಂ ಇಂಡಿಯಾದಲ್ಲಿದ್ದಾಗ ಭಾರೀ ಒಳ್ಳೆ ಸ್ನೇಹಿತರು. ಆ ಸ್ನೇಹ ಈಗಲೂ ಮುಂದುವರಿದಿದೆ ಎನ್ನುವುದಕ್ಕೆ ಇವರ ಇತ್ತೀಚೆಗಿನ ಟ್ವೀಟ್ ಸಾಕ್ಷಿಯಾಗಿದೆ.
ತಾವು ತಂಡದಲ್ಲಿದ್ದಾಗ ಸಹ ಕ್ರಿಕೆಟಿಗರಿಗೆ ತರ್ಲೆ ಮಾಡುವುದರಲ್ಲಿ ಇಬ್ಬರದೂ ಎತ್ತಿದ ಕೈ. ಇದೀಗ ಯುವಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪವರ್ ಕಟ್ ಬಗ್ಗೆ ಬರೆದುಕೊಂಡಿದ್ದಕ್ಕೆ ಭಜಿ ತಮಾಷೆ ಮಾಡಿದ್ದಾರೆ.
ಬಾಂದ್ರಾದ ತಮ್ಮ ನಿವಾಸದಲ್ಲಿ ಕರೆಂಟ್ ಹೋಗಿದ್ದಾಗ ಯುವಿ ‘ಒಂದು ಗಂಟೆಯಾಯಿತು ಇನ್ನೂ ಪವರ್ ಬಂದಿಲ್ಲ. ಬಾಂದ್ರಾದಲ್ಲಿ ಯಾರಾದರೂ ಕರೆಂಟ್ ಕೊಡುವವರು ಇದ್ದೀರಾ?’ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದರು.
ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಭಜಿ ‘ದೊರೆ.. ಮೊದಲು ಕರೆಂಟ್ ಬಿಲ್ ಕಟ್ಟು..’ ಎಂದು ತಮಾಷೆ ಮಾಡಿದ್ದಾರೆ. ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.