ವಿಶ್ವಕಪ್ ಗೆದ್ದ ಬಳಿಕ ಜೂಲಾನ್ ಗೋಸ್ವಾಮಿಗೆ ಸ್ಮೃತಿ ಮಂಧಾನ, ಹರ್ಮನ್ ಕ್ಷಮೆ ಕೇಳಿದ್ದೇಕೆ

Krishnaveni K
ಸೋಮವಾರ, 3 ನವೆಂಬರ್ 2025 (11:29 IST)
Photo Credit: X
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ವಿಜೇತರಾದ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಹಿರಿಯ ತಾರೆ ಜೂಲಾನ್ ಗೋಸ್ವಾಮಿ ಬಳಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಒಂದು ಕಾರಣವೂ ಇದೆ.

ಭಾರತ ಮಹಿಳಾ ಕ್ರಿಕೆಟ್ ನಲ್ಲಿ ಮಿಂಚಿ ಈಗ ನಿವೃತ್ತಿಯಾದ ತಾರೆಯರ ಪೈಕಿ ಜೂಲಾನ್ ಗೋಸ್ವಾಮಿ ಕೂಡಾ ಪ್ರಮುಖರು. ವೇಗದ ಬೌಲರ್ ಭಾರತದ ಪರ ವಿಶ್ವಕಪ್ ಗಳಲ್ಲಿ ಆಡಿದ್ದರು. ಈ ಹಿಂದೆ ಭಾರತ ತಂಡ ಫೈನಲ್ ಗೆ ತಲುಪಿದ್ದಾಗ ಜೂಲಾನ್ ತಂಡದಲ್ಲಿದ್ದರು. ಆದರೆ ಆಗ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.

ಕಳೆದ ಬಾರಿ ಅವರಿಗೆ ಕೊನೆಯ ವಿಶ್ವಕಪ್ ಆಗಿತ್ತು. ಹೀಗಾಗಿ ವಿಶ್ವಕಪ್ ಗೆದ್ದು ಜೂಲಾನ್ ಗೆ ತಕ್ಕ ಗೌರವದ ವಿದಾಯ ನೀಡಬೇಕು ಎಂದು ಹರ್ಮನ್, ಸ್ಮೃತಿ ಅಂದುಕೊಂಡಿದ್ದರು. ಸ್ಮೃತಿ ಅಂದು ‘ದೀದಿ,  ಈ ಬಾರಿ ನಿಮಗಾಗಿ ಕಪ್ ಗೆಲ್ಲುತ್ತೇವೆ’ ಎಂದಿದ್ದರಂತೆ. ಆದರೆ ಅದು ಆಗಲೇ ಇಲ್ಲ.

ಆದರೆ ನಿನ್ನೆ ವಿಶ್ವಕಪ್ ಗೆದ್ದ ಬಳಿಕ ಜೂಲಾನ್ ರನ್ನು ಮೈದಾನಕ್ಕೆ ಕರೆಸಿದ ಸ್ಮೃತಿ, ಹರ್ಮನ್ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಸ್ಮೃತಿ ‘ಆವತ್ತು ನಿಮಗಾಗಿ ಗೆಲ್ಲುತ್ತೇವೆ ಎಂದಿದ್ದೆವು ಆದರೆ ಗೆಲ್ಲಲಾಗಲಿಲ್ಲ ದೀದಿ. ಇದಕ್ಕೆ ಕ್ಷಮೆಯಿರಲಿ. ಈ ಬಾರಿ ಗೆದ್ದಿದ್ದೇವೆ, ಇದು ನಿಮಗಾಗಿ’ ಎಂದು ಟ್ರೋಫಿ ನೀಡಿ ಗೌರವಿಸಿದ್ದಾರೆ. ಈ ಕ್ಷಣದಲ್ಲಿ ಜೂಲಾನ್ ಕೂಡಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರೇಕ್ಷಕರೆಲ್ಲರೂ ಹೋದ ಮೇಲೆ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್ ಸ್ಟೈಲೇ ಬೇರೆ: video

Video: ಮಿಥಾಲಿ ರಾಜ್ ಜೊತೆಗೆ ಹಳೆಯ ಸಿಟ್ಟಿದ್ದರೂ ಹರ್ಮನ್ ಪ್ರೀತ್ ಟ್ರೋಫಿ ಗೆದ್ದ ಬಳಿಕ ಮಾಡಿದ್ದೇನು

Video: ತೆಲಂಗಾಣದಲ್ಲಿ ಮತ್ತೊಂದು ಭೀಕರ ಆಕ್ಸಿಡೆಂಟ್: 16 ಸಾವು

ಟ್ರೋಫಿ ಸ್ವೀಕರಿಸಲು ಹೊಸ ಸ್ಟೈಲ್.. ಹರ್ಮನ್ ಪ್ರೀತ್ ಕೌರ್ ಮಾಡಿದ್ದು ಪುರುಷ ಕ್ರಿಕೆಟಿಗರೂ ಮಾಡಿಲ್ಲ video

INDW vs SAW: ಪ್ರಶಸ್ತಿ ಗೆದ್ದ ಖುಷಿಯಲ್ಲಿ ಕಾಲಿಗೆ ಬಿದ್ದ ಹರ್ಮನ್ ಪ್ರೀತ್ ಕೌರ್: ಜಯ್ ಶಾ ಏನು ಮಾಡಿದ್ರು ವಿಡಿಯೋ ನೋಡಿ

ಮುಂದಿನ ಸುದ್ದಿ
Show comments