Select Your Language

Notifications

webdunia
webdunia
webdunia
webdunia

ಧೋನಿ ಯಾಕೆ ನಂ.7 ಜೆರ್ಸಿ ತೊಡುತ್ತಾರೆ? ಅವರೇ ಹೇಳ್ತಾರೆ ನೋಡಿ

Dhoni

Krishnaveni K

ರಾಂಚಿ , ಸೋಮವಾರ, 12 ಫೆಬ್ರವರಿ 2024 (10:50 IST)
Photo Courtesy: Twitter
ರಾಂಚಿ: ಟೀಂ ಇಂಡಿಯಾದ ಯಶಸ್ವೀ ನಾಯಕ ಎಂಎಸ್ ಧೋನಿ ಜೆರ್ಸಿ ನಂಬರ್ ಎಷ್ಟು ಎಂದರೆ ಥಟ್ಟನೇ ಎಲ್ಲರೂ 7 ಎಂದು ಹೇಳುತ್ತಾರೆ. ಧೋನಿ ಮತ್ತು 7 ರ ಸಂಖ್ಯೆ ಎಲ್ಲರಿಗೂ ಅಷ್ಟು ಚಿರಪರಿಚಿತ.

ಇದೀಗ ಕಾರ್ಯಕ್ರಮವೊಂದರಲ್ಲಿ ಧೋನಿ ತಾನ್ಯಾಕೆ ಸಮವಸ್ತ್ರದ ಸಂಖ್ಯೆಯನ್ನು 7 ಎಂದು ಆಯ್ಕೆ ಮಾಡಿದ್ದು ಎಂದು ರಿವೀಲ್ ಮಾಡಿದ್ದಾರೆ. ಕೇವಲ ಭಾರತ ತಂಡದಲ್ಲಿದ್ದಾಗ ಮಾತ್ರವಲ್ಲ, ಅವರು ಪ್ರತಿನಿಧಿಸುತ್ತಿರುವ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ನಲ್ಲೂ ಧೋನಿ 7 ನಂಬರ್ ನ ಜೆರ್ಸಿ ತೊಟ್ಟು ಆಡುತ್ತಾರೆ. ಇದಕ್ಕೆ ಕಾರಣವೇನೆಂದು ಅವರು ರಿವೀಲ್ ಮಾಡಿದ್ದಾರೆ.

ಧೋನಿ ಹೇಳಿದ ಕಾರಣವೇನು?
ಕಾರ್ಯಕ್ರಮವೊಂದರಲ್ಲಿ ಅವರಿಗೆ ನೀವ್ಯಾಕೆ ಜೆರ್ಸಿ ನಂಬರ್ ನ್ನು 7 ಎಂದು ಆಯ್ಕೆ ಮಾಡಿದಿರಿ ಎಂದು ಕೇಳಲಾಯಿತು. ಇದಕ್ಕೆ ನಗುತ್ತಾ ಉತ್ತರಿಸಿದ ಧೋನಿ ‘ಅದೇ ದಿನ ನನ್ನ ತಂದೆ-ತಾಯಿ ನನ್ನನ್ನು ಭೂಮಿಗೆ ತರಲು ನಿರ್ಧಾರ ಮಾಡಿದರು’ ಎಂದಾಗ ಇಡೀ ಸಭಾಂಗಣವೇ ನಗೆಗಡಲಲ್ಲಿ ತೇಲಿತು.

ಬಳಿಕ ಮುಂದುವರಿಸಿದ ಧೋನಿ ‘ನಾನು ಹುಟ್ಟಿದ್ದು 7 ನೇ ತಾರಿಖು, ಜುಲೈ ಎಂದರೆ ಏಳನೇ ತಿಂಗಳು. ವರ್ಷ 81 ಅಂದರೆ 8 ಮೈನಸ್ 1 ಎಂದರೆ ಮತ್ತೆ 7. ಹೀಗಾಗಿ ನಾನು ತಂಡಕ್ಕೆ ಸೇರಿದಾಗ ನಿನಗೆ ಯಾವ ನಂಬರ್ ಬೇಕು ಎಂದು ಕೇಳಿದಾಗ ಸುಲಭವಾಗಿ 7 ಎಂದೆ’ ಎಂದರು.

ಧೋನಿ ಜೊತೆಗೆ 7 ನಂಬರ್ ಕೂಡಾ ಫೇಮಸ್ ಆಯಿತು. ಇತ್ತೀಚೆಗೆ ಬಿಸಿಸಿಐ ಧೋನಿ ಮೇಲಿನ ಗೌರವದಿಂದ 7 ನಂಬರ್ ಜೆರ್ಸಿಗೇ ನಿವೃತ್ತಿ ನೀಡಿದೆ. ಈ ಸಂಖ್ಯೆಯ ಜೆರ್ಸಿಯನ್ನು ಯಾವ ಆಟಗಾರನಿಗೂ ನೀಡುವಂತಿಲ್ಲ ಎಂದು ಗೌರವ ಸಮರ್ಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಟೆಸ್ಟ್ ಗೆ ಮುನ್ನ ಫಿಟ್ನೆಸ್ ಬಗ್ಗೆ ಸಾಕ್ಷಿ ಕೊಟ್ಟ ಕೆಎಲ್ ರಾಹುಲ್