Publish Date: Sun, 06 Dec 2020 (09:12 IST)
Updated Date: Sun, 06 Dec 2020 (09:14 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಗಾಯಗೊಂಡಿರುವ ಆಲ್ ರೌಂಡರ್ ರವೀಂದ್ರ ಜಡೇಜಾ ಬದಲಿಗೆ ಭಾರತ ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲವಿದೆ.
ಜಡೇಜಾ ಸ್ಥಾನಕ್ಕೆ ತಂಡದಲ್ಲಿ ಶ್ರಾದ್ಧೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ. ಆದರೆ ಅವರಿಗೆ ಇಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ. ಅವರ ಬದಲು ವಾಷಿಂಗ್ಟನ್ ಸುಂದರ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಇನ್ನು, ಜಸ್ಪ್ರೀತ್ ಬುಮ್ರಾರನ್ನು ಅಭ್ಯಾಸ ಟೆಸ್ಟ್ ಪಂದ್ಯವಾಡಲಿರುವ ಭಾರತ ಎ ತಂಡಕ್ಕೆ ಕಳುಹಿಸಿಕೊಡುವ ಸಾಧ‍್ಯತೆಯಿರುವುದರಿಂದ ಅವರೂ ಇಂದಿನ ಪಂದ್ಯದಲ್ಲಿ ಅಡುವುದು ಅನುಮಾನ. ಹೀಗಾಗಿ ದೀಪಕ್ ಚಹರ್, ವಾಸಿಂಗ್ಟನ್ ಸುಂದರ್ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ‍್ಯತೆಯಿದೆ.