Select Your Language

Notifications

webdunia
webdunia
webdunia
webdunia

‘ಅಪ್ಪ’ ಧೋನಿ ಒಳ್ಳೆಯವರಾ? ಕೆಟ್ಟವರಾ? ಪುತ್ರಿ ಜೀವಾ ಸ್ಮಾರ್ಟ್ ಉತ್ತರ ಏನಿದೆ ನೋಡಿ!

What Zeeva Dhoni’s answer on Dhoni
ರಾಂಚಿ , ಗುರುವಾರ, 23 ಆಗಸ್ಟ್ 2018 (09:19 IST)
ರಾಂಚಿ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವಿನಲ್ಲಿರುವ ಧೋನಿ ತಮ್ಮ ಪುತ್ರಿ, ಪತ್ನಿ ಜತೆ ಹಾಯಾಗಿ ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಬಿಡುವಿನ ವೇಳೆಯಲ್ಲಿ ಪುತ್ರಿ ಜೀವಾ ಜತೆಗೆ ಆಟವಾಡುತ್ತಾ ಪಕ್ಕಾ ಒಳ್ಳೆಯ ಅಪ್ಪನಾಗುತ್ತಿದ್ದಾರೆ.

ಧೋನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಅಪ್ಪ-ಮಗಳು ಜತೆಯಾಗಿ ಬಾಲ್ ಆಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಧೋನಿ ಪತ್ನಿ ಸಾಕ್ಷಿ ಜೀವಾ ಬಳಿ ‘ನಿನ್ನ ಪ್ರಕಾರ ಅಪ್ಪ ಒಳ್ಳೆಯವರಾ? ಕೆಟ್ಟವರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಮುದ್ದು ಜೀವಾ ತನ್ನ ಮುದ್ದಾದ ಧನಿಯಲ್ಲಿ ‘ನೀವು ಎಲ್ಲರೂ ಒಳ್ಳೆಯವರೇ’ ಎಂದು ಸ್ಮಾರ್ಟ್ ಉತ್ತರ ಕೊಡುತ್ತಾಳೆ. ಎಷ್ಟೇ ಆದರೂ ಸ್ಮಾರ್ಟ್ ಕ್ಯಾಪ್ಟನ್ ಕೂಲ್ ಮಗಳಲ್ವಾ? ಹಾಗೇ ಇರ್ತಾಳೆ ಬಿಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಇನ್ನು ವಿರಾಟ್ ಕೊಹ್ಲಿ ಹೆಸರು ಅಜರಾಮರ! ಹೇಗೆ ಗೊತ್ತಾ?