Publish Date: Wed, 18 Dec 2019 (13:10 IST)
Updated Date: Wed, 18 Dec 2019 (13:12 IST)
ವಿಶಾಖಪಟ್ಟಣ: ಯಾಕೋ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಅದೃಷ್ಟವೇ ಸರಿ ಇಲ್ಲವೇನೋ. ದ್ವಿತೀಯ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಟಾಸ್ ಸೋತಿದೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಇದುವರೆಗೂ ಟಾಸ್ ಗೆದ್ದವರೇ ಪಂದ್ಯ ಗೆದ್ದಿರುವುದರಿಂದ ಟೀಂ ಇಂಡಿಯಾಕ್ಕೆ ಆರಂಭದಲ್ಲಿಯೇ ನಿರಾಸೆಯಾದಂತಿದೆ.
ಇಂದಿನ ಪಂದ್ಯ ಸೋತರೆ ಭಾರತ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಭಾರತ ಒಂದು ಬದಲಾವಣೆ ಮಾಡಿಕೊಂಡಿದ್ದು, ಶಿವಂ ದುಬೆ ಸ್ಥಾನಕ್ಕೆ ಶ್ರಾದ್ಧೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.