Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಅಭ್ಯಾಸಕ್ಕೆ ಬಂದ ಬುಮ್ರಾ, ಪೃಥ್ವಿ ಶಾ

ಜಸ್ಪ್ರೀತ್ ಬುಮ್ರಾ
ವಿಶಾಖಪಟ್ಟಣ: ಗಾಯದಿಂದ ಚೇತರಿಸಿಕೊಂಡ ಮೇಲೆ ಟೀಂ ಇಂಡಿಯಾ ಬರಲು ಸಜ್ಜಾಗುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ನಿಷೇಧದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ಸಿದ್ಧತೆ ನಡೆಸಿರುವ ಪೃಥ್ವಿ ಶಾ ಟೀಂ ಇಂಡಿಯಾ ಅಭ್ಯಾಸಕ್ಕೆ ಹಾಜರಾಗಿದ್ದಾರೆ.


ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆಯಲಿರುವ ದ್ವಿತೀಯ ಏಕದಿನ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ನೆಟ್ ಪ್ರಾಕ್ಟೀಸ್ ನಡೆಸಿದ್ದು, ಈ ಅಭ್ಯಾಸದಲ್ಲಿ ಬುಮ್ರಾ ಮತ್ತು ಪೃಥ್ವಿ ಶಾ ಕೂಡಾ ಭಾಗಿಯಾದರು.

ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಪೃಥ್ವಿ ಶಾ ನಿಷೇಧಿತ ಔಷಧ ಸೇವಿಸಿದ ತಪ್ಪಿಗೆ ಕೆಲವು ತಿಂಗಳು ಕಾಲ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿ ದೇಶೀಯ ಪಂದ್ಯಗಳಲ್ಲಿ ಆಡಿ ಉತ್ತಮ ರನ್ ಗಳಿಸಿದ್ದರು. ಇದೀಗ ಟೀಂ ಇಂಡಿಯಾಗೆ ಮತ್ತೆ ಆಯ್ಕೆಯಾಗಲು ಸಿದ್ಧತೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ದ್ವಿತೀಯ ಏಕದಿನ ಇಂದು: ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯರತೆ