Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ದ್ವಿತೀಯ ಏಕದಿನ ಇಂದು: ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯರತೆ

ಭಾರತ-ವಿಂಡೀಸ್ ದ್ವಿತೀಯ ಏಕದಿನ ಇಂದು: ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯರತೆ
ವಿಶಾಖಪಟ್ಟಣ , ಬುಧವಾರ, 18 ಡಿಸೆಂಬರ್ 2019 (09:03 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಈ ಪಂದ್ಯಕ್ಕೆ ಬದಲಾವಣೆ ಮಾಡಿಕೊಳ್ಳುವ ಸಾಧ‍್ಯತೆಯಿದೆ.


ಮೂರು ಪಂದ್ಯಗಳ ಸರಣಿಯಲ್ಲಿ ವಿಂಡೀಸ್ 1-0 ಅಂತರದಿಂದ ಮುನ್ನಡೆಯಲ್ಲಿದೆ. ಭಾರತಕ್ಕೆ ಸರಣಿ ಉಳಿಸಿಕೊಳ್ಳಲು ಇಂದಿನ ಪಂದ್ಯ ಗೆಲ್ಲಲೇಬೇಕಾಗಿದೆ. ವಿಂಡೀಸ್ ವಿರುದ್ಧ ಎಲ್ಲಾ ಪಂದ್ಯಗಳಲ್ಲೂ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಭಾರತ ಕಳಪೆ ಪ್ರದರ್ಶನ ನೀಡಬೇಕಾಯಿತು.

ಹೀಗಾಗಿ ಈ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ನಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಪಂದ್ಯಕ್ಕೆ ಶಿವಂ ದುಬೆ ಬದಲು ಯಜುವೇಂದ್ರ ಚಾಹಲ್ ಗೆ ಸ್ಥಾನ ನೀಡುವ ಸಾಧ‍್ಯತೆಯೂ ಇದೆ. ಸಾಧ‍್ಯವಾದರೆ ಇಬ್ಬರು ಸ್ಪಿನ್ನರ್ ಗಳೊಂದಿಗೆ ಭಾರತ ಕಣಕ್ಕಿಳಿಯಬಹುದು. ಪಂದ್ಯ ಮಧ‍್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಭುವನೇಶ್ವರ್ ಕುಮಾರ್ ವಿವಾದದಿಂದ ಎಚ್ಚೆತ್ತುಕೊಂಡ ಬಿಸಿಸಿಐ, ಎನ್ ಸಿಎ ಮೇಲೆ ಹದ್ದಿನಗಣ್ಣು