Publish Date: Tue, 17 Dec 2019 (10:10 IST)
Updated Date: Tue, 17 Dec 2019 (10:13 IST)
ಮುಂಬೈ: ಜನವರಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಸರಣಿಯಲ್ಲಿ ಆಸ್ಟ್ರೇಲಿಯಾ ಮೂರು ಏಕದಿನ ಪಂದ್ಯಗಳನ್ನಾಡಲಿದೆ.
ಇದಕ್ಕಾಗಿ ಆಸ್ಟ್ರೇಲಿಯಾ 14 ಸದಸ್ಯರ ತಂಡವನ್ನು ಘೋಷಿಸಿದೆ. ವಿಶೇಷವೆಂದರೆ ಪ್ರಮುಖ ಆಟಗಾರರಾದ ಶಾನ್ ಮಾರ್ಷ್, ಉಸ್ಮಾನ್ ಖವಾಜ, ನಥನ್ ಲಿಯೋನ್, ಗ್ಲೆನ್ ಮ್ಯಾಕ್ಸ್ ವೆಲ್ ಮುಂತಾದ ಘಟಾನುಘಟಿಗಳನ್ನು ಕೈ ಬಿಡಲಾಗಿದೆ.
ಜನವರಿ 14 ರಿಂದ ಸರಣಿ ಆರಂಭವಾಗಲಿದ್ದು, ಮುಂಬೈ ರಾಜ್ ಕೋಟ್ ಮತ್ತು ಅಂತಿಮ ಪಂದ್ಯ ಜನವರಿ 19 ರಂದು ಮುಂಬೈನಲ್ಲಿ ನಡೆಯಲಿದೆ.