Select Your Language

Notifications

webdunia
webdunia
webdunia
webdunia

ಬೆತ್‌ ಮೂನಿ ಅಬ್ಬರಕ್ಕೆ ಯು.ಪಿ ವಾರಿಯರ್ಸ್‌ ತತ್ತರ: ಆತಿಥೇಯರ ವಿರುದ್ಧ ಗುಜರಾತ್‌ ಜೈಂಟ್ಸ್ ಸವಾರಿ

Women's Premier League

Sampriya

ಲಖನೌ , ಸೋಮವಾರ, 3 ಮಾರ್ಚ್ 2025 (23:45 IST)
Photo Courtesy X
ಲಖನೌ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಲಖನೌ ಲೆಗ್‌ ಸೋಮವಾರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಯು.ಪಿ. ವಾರಿಯರ್ಸ್‌ ಮುಗ್ಗರಿಸಿತು.

ಗುಜರಾತ್‌ ಜೈಂಟ್ಸ್‌ ತಂಡದ ಬೆತ್‌ ಮೂನಿ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಗುಜರಾತ್‌ ಜೈಂಟ್ಸ್‌ ತಂಡವು 81 ರನ್‌ಗಳಿಂದ ವಾರಿಯರ್ಸ್‌ ವಿರುದ್ಧ ಸವಾರಿ ಮಾಡಿತು.

ಏಕನಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 186 ರನ್ ಗಳಿಸಿತು. ಆದರೆ, ವಾರಿಯರ್ಸ್‌ 17.1 ಓವರ್‌ಗಳಲ್ಲಿ 105 ರನ್‌ಗಳಿಸಿ ಹೋರಾಟ ಮುಗಿಸಿತು.  ಜೈಂಟ್ಸ್‌ನ ಕಶ್ವಿ ಗೌತಮ್‌ ಮತ್ತು ತನುಜಾ ಕನ್ವರ್‌ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿಯೇ ಷಿನೆಲ್ ಹೆನ್ರಿ ಅವರ ಎಸೆತದಲ್ಲಿ ಹೇಮಲತಾ ದಯಾಳನ್ (2) ಅವರು ಔಟಾದರು. ಆದರೆ, ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಮೂನಿ ಅಜೇಯ 96 ರನ್‌ ಸಿಡಿಸಿದರು. ಮೂನಿ  ಮತ್ತು ಹರ್ಲಿನ್ ಡಿಯೊಲ್ (45; 32ಎಸೆತ) ಎರಡನೇ ವಿಕೆಟ್ ಜೊತೆಯಾಟದಲ್ಲಿ 101 ರನ್ ಸೇರಿಸಿದರು.

ಗುಜರಾತ್ ಜೈಂಟ್ಸ್‌ಗೆ ಇದು ಮೂರನೇ ಜಯ. ಈ ಗೆಲುವಿನೊಂದಿಗೆ ಆರು ಅಂಕ ಸಂಪಾದಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಡೆಲ್ಲಿ ಕ್ಯಾಪಿಟಲ್ಸ್‌ (10) ಅಗ್ರಸ್ಥಾನದಲ್ಲಿದೆ. ವಾರಿಯರ್ಸ್‌ (4) ಕೊನೆಯ ಸ್ಥಾನಕ್ಕೆ ಸರಿಯಿತು. ಆರ್‌ಸಿಬಿ ತಂಡ ನಾಲ್ಕನೇ ಸ್ಥಾನದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ಬದುಕಿ ಬಂದ ರಿಷಭ್ ಪಂತ್‌ಗೆ ವಿಶ್ವದ ಕ್ರೀಡಾ ಪ್ರಶಸ್ತಿಗೆ ನಾಮ ನಿರ್ದೇಶನ