ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಆಡದೇ ಇರಲು ತೀರ್ಮಾನಿಸಿದ್ದಾರೆ.
ಅವರು ಈಗಾಗಲೇ ಟಿ20 ಫಾರ್ಮ್ಯಾಟ್ ನಿಂದ ಹೊರಗುಳಿದಿದ್ದಾರೆ. ಕಳೆದ ಒಂದು ವರ್ಷದಿಂದ ಟಿ20 ತಂಡದಿಂದ ದೂರವಿದ್ದಾರೆ. ಮುಂಬರುವ ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೂ ಅಲಭ್ಯರಾಗಿದ್ದಾರೆ.
ಹೀಗಾಗಿ ಮುಂದಿನ ಜೂನ್ ನಲ್ಲಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಅವರು ಪಾಲ್ಗೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ ಅವರ ಪಾಲಿಗೆ ಕೊನೆಯ ವಿಶ್ವಕಪ್ ಆಗಿರಬಹುದು.
ಕೊಹ್ಲಿಗೆ ಈಗ 35 ವರ್ಷ. ಮುಂದಿನ ಏಕದಿನ ವಿಶ್ವಕಪ್ ನಡೆಯಲು ಇನ್ನೂ ನಾಲ್ಕು ವರ್ಷಗಳಿವೆ. ಅಂದರೆ 2027 ರಲ್ಲಿ ದ.ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆಗೆ ಅವರಿಗೆ 39 ವರ್ಷವಾಗಿರುತ್ತದೆ. ಆಗ ಅವರು ವೈಟ್ ಬಾಲ್ ಕ್ರಿಕೆಟ್ ನಲ್ಲಿರುವುದು ಅನುಮಾನವಾಗಿದೆ.